ಪ್ರಧಾನಿ ಮೋದಿ ನಂತರ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಲು ಸಮರ್ಥರೇ?
ಪ್ರತಿಪಕ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾದ ಪ್ರತಿಸ್ಪರ್ಧಿ ಇಲ್ಲ. ಆದರೆ ಭಾರತೀಯ ಜನತಾ ಪಕ್ಷದಲ್ಲೇ ಪ್ರಧಾನಿ ಮೋದಿಗೆ ಪರ್ಯಾಯ ವ್ಯಕ್ತಿಯಿದ್ದಾರೆ ! ನಾವು ಇದನ್ನು ಹೇಳುತ್ತಿಲ್ಲ,.. ಆದರೆ ಸಮೀಕ್ಷೆಯಿಂದ ಈ ವಿಷಯವು ಬಹಿರಂಗವಾಗಿದೆ !
ವಾಸ್ತವವಾಗಿ, ನ್ಯೂಸ್ ಚಾನೆಲ್ ಒಂದು ಸಮೀಕ್ಷೆಯನ್ನು ಮಾಡಿದೆ. ಇದರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜನರು ಬಹಳಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.
ಹಾಗೆಯೇ ಪ್ರಧಾನಿ ಮೋದಿಯ ನಂತರ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಲು ಸಮರ್ಥರಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ 50% ಜನರು ಹೌದು, ಮೋದಿಯ ಬದಲು ಯೋಗಿ ಪ್ರಧಾನಿಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
37% ಜನರು, ಪ್ರಧಾನಿ ಮೋದಿಯ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 13% ಜನರು ಇನ್ನೂ ಇದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮುಂದಿನ ವರ್ಷ ಅಂದರೆ 2022ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರದಲ್ಲಿನ 15447 ಜನರನ್ನು ನ್ಯೂಸ್ ಚಾನೆಲ್ ಸಂದರ್ಶಿಸಿದೆ. ಈ ಸಮೀಕ್ಷೆಯಲ್ಲಿ, 2021 ರ ಅಂದಾಜಿನ ಪ್ರಕಾರ, ಭಾರತೀಯ ಜನತಾ ಪಕ್ಷವು ಮುಂಬರುವ ಚುನಾವಣೆಯಲ್ಲಿ 284-294 ಸ್ಥಾನಗಳನ್ನು ಗೆಲ್ಲಬಹುದು! ಮತ್ತೊಂದೆಡೆ, ಸಮಾಜವಾದಿ ಪಕ್ಷದಂತಹ ಇತರ ಪಕ್ಷಗಳ 2022 ರಲ್ಲಿ 54-64 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದರೆ, ಬಹುಜನ ಸಮಾಜ ಪಕ್ಷಕ್ಕೆ 33 ರಿಂದ 43 ಸ್ಥಾನಗಳು ದೊರೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ 1 ರಿಂದ 7 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ.
ಬಾಳೆಹಣ್ಣಿನೊಂದಿಗೆ ಹಾಲು ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/vUrt3OH4rL
— Saaksha TV (@SaakshaTv) March 16, 2021
ವಾಟ್ಸಾಪ್ ನಲ್ಲಿ ರೈಲಿನ ಸಮಯದ ಆಪ್ಡೇಟ್ಸ್ (live status) ಪಡೆಯುವುದು ಹೇಗೆ – ಇಲ್ಲಿದೆ ಮಾಹಿತಿ https://t.co/zCUP18XFFs
— Saaksha TV (@SaakshaTv) March 16, 2021
ಚಟ್ಟಂಬಡೆ / ಮಸಾಲ ವಡಾ https://t.co/EgnEuP7qTp
— Saaksha TV (@SaakshaTv) March 16, 2021