ಪ್ರಧಾನಿ ಮೋದಿ ನಂತರ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಲು ಸಮರ್ಥರೇ?

1 min read
Modi or yogi

ಪ್ರಧಾನಿ ಮೋದಿ ನಂತರ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಲು ಸಮರ್ಥರೇ?

ಪ್ರತಿಪಕ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾದ ಪ್ರತಿಸ್ಪರ್ಧಿ ಇಲ್ಲ. ಆದರೆ ಭಾರತೀಯ ಜನತಾ ಪಕ್ಷದಲ್ಲೇ ಪ್ರಧಾನಿ ಮೋದಿಗೆ ಪರ್ಯಾಯ ವ್ಯಕ್ತಿಯಿದ್ದಾರೆ ! ನಾವು ಇದನ್ನು ಹೇಳುತ್ತಿಲ್ಲ,.. ಆದರೆ ಸಮೀಕ್ಷೆಯಿಂದ ಈ ವಿಷಯವು ಬಹಿರಂಗವಾಗಿದೆ !
Modi or yogi

ವಾಸ್ತವವಾಗಿ, ನ್ಯೂಸ್ ಚಾನೆಲ್ ಒಂದು ಸಮೀಕ್ಷೆಯನ್ನು ಮಾಡಿದೆ. ಇದರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜನರು ಬಹಳಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.
ಹಾಗೆಯೇ ಪ್ರಧಾನಿ ಮೋದಿಯ ನಂತರ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಲು ಸಮರ್ಥರಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ 50% ಜನರು ಹೌದು, ಮೋದಿಯ ಬದಲು ಯೋಗಿ ಪ್ರಧಾನಿಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
37% ಜನರು, ಪ್ರಧಾನಿ ಮೋದಿಯ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ‌ 13% ಜನರು ಇನ್ನೂ ಇದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Modi or yogi

ಮುಂದಿನ ವರ್ಷ ಅಂದರೆ 2022ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರದಲ್ಲಿನ 15447 ಜನರನ್ನು ನ್ಯೂಸ್ ಚಾನೆಲ್ ಸಂದರ್ಶಿಸಿದೆ. ಈ ಸಮೀಕ್ಷೆಯಲ್ಲಿ, 2021 ರ ಅಂದಾಜಿನ ಪ್ರಕಾರ, ಭಾರತೀಯ ಜನತಾ ಪಕ್ಷವು ಮುಂಬರುವ ಚುನಾವಣೆಯಲ್ಲಿ 284-294 ಸ್ಥಾನಗಳನ್ನು ಗೆಲ್ಲಬಹುದು!  ಮತ್ತೊಂದೆಡೆ, ಸಮಾಜವಾದಿ ಪಕ್ಷದಂತಹ ಇತರ ಪಕ್ಷಗಳ 2022 ರಲ್ಲಿ 54-64 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದರೆ, ಬಹುಜನ ಸಮಾಜ ಪಕ್ಷಕ್ಕೆ 33 ರಿಂದ 43 ಸ್ಥಾನಗಳು ದೊರೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ 1 ರಿಂದ 7 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd