ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ – ಮೋದಿ ಜನರಿಗೆ ಕೊಟ್ಟ ಸಂದೇಶವೇನು…?
ಪಶ್ಚಿಮ ಬಂಗಾಳ / ಅಸ್ಸಾಂ : ಇಂದು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಬಿರುಸಿನಿಂದ ಆರಂಭವಾಗಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಮತದಾನ ಅರ್ಹತೆ ಹೊಂದಿರುವವರು ದಾಖಲೆಯ ಮತದಾನ ಮಾಡಿ. ಅದರಲ್ಲೂ ವಿಶೇಷವಾಗಿ ನನ್ನ ಯುವ ಸಮೂಹಕ್ಕೆ ಮತದಾನ ಮಾಡಲು ಕೋರುತ್ತೇನೆ ಎಂದಿದ್ದಾರೆ.
ಅಲ್ಲದೇ ಎಲ್ಲರೂ ತಮ್ಮ ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿ ದಾಖಲೆ ಸಂಖ್ಯೆಯಲ್ಲಿ ಮತವನ್ನು ಚಲಾಯಿಸಿ ಎಂದು ಮೋದಿ ಕರೆ ನೀಡಿದ್ದಾರೆ.