ನವದೆಹಲಿ : 2015ರಿಂದ ಪ್ರಧಾನಿ ನರೇಂದ್ರ ಮೋದಿ ಅವರು 58 ದೇಶಗಳಿಗೆ ಭೇಟಿ ನೀಡಿದ್ದು, ಇದಕ್ಕೆ 517.82 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಎಷ್ಟು ದೇಶಗಳಿಗೆ ಭೇಟಿ ನೀಡಿದ್ದಾರೆ, ಎಷ್ಟು ವೆಚ್ಚವಾಗಿದೆ ಎಂದು ಕೇಳಲಾದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರುಳೀಧರನ್ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಮುಖ್ಯವಾಗಿ ಅಮೆರಿಕ ಹಾಗೂ ರಷ್ಯಾ ದೇಶಗಳಿಗೆ ಪ್ರಧಾನಿ ಮೋದಿ ಹೆಚ್ಚಿಗೆ ಭೇಟಿ ನೀಡಿದ್ದು, ಇದಕ್ಕೆ ತಲಾ 5 ಬಾರಿ ಭೇಟಿ ನೀಡಿದ್ದಾರೆ.
ಸಿಂಗಾಪುರ, ಜರ್ಮನಿ, ಫ್ರಾನ್ಸ್, ಯುಎಇ ಮತ್ತು ಶ್ರೀಲಂಕಾಗಳಿಗೂ ಸಹ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಈ ಪ್ರವಾಸಗಳಿಗೆ ಒಟ್ಟು 517.82 ಕೋಟಿ ರೂ. ಖರ್ಚಾಗಿದೆ ಎಂದು ಕೇಂದ್ರ ಹೇಳಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಬ್ರೆಜಿಲ್ಗೆ ಭೇಟಿ ನೀಡಿರುವುದು ಮೋದಿಯ ಕೊನೆಯ ವಿದೇಶ ಪ್ರವಾಸವಾಗಿದೆ. ಕಳೆದ ನವೆಂಬರ್ ಆರಂಭದಲ್ಲಿ ಥೈಲ್ಯಾಂಡ್ಗೆ ಮೋದಿ ಭೇಟಿ ನೀಡಿದ್ದರು.