ರಾಹುಲ್ ಗೆ ಬಿಡದ ಮೋದಿ ಉಪನಾಮದ ಸಂಕಷ್ಟ – ಪಾಟ್ನಾ ಕೋರ್ಟ್ ನಿಂದ ಸಮನ್ಸ್ ಜಾರಿ…
ಮೋದಿ ಉಪನಾಮದ ಕುರಿತು ನೀಡಿದ್ದ ಹೇಳಿಕೆ ರಾಹುಲ್ ಗಾಂಧಿಗೆ ಮಗ್ಗಲು ಮುಳ್ಳಾಗಿ ಕಾಡುತ್ತಿದೆ. ಮಾರ್ಚ್ 23 ರಂದು, ಸೂರತ್ ನ್ಯಾಯಾಲಯ ಮೋದಿ ಉಪನಾಮದ ಬಗ್ಗೆ ಕೆಟ್ಟದಾಗಿ ಮಾತನಾಡಿದಕ್ಕೆ ಕಾಂಗ್ರೆಸ್ ನಾಯಕನನ್ನ ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಇದು ಕೇರಳದ ವಯನಾಡ್ ಕ್ಷೇತ್ರದ ಲೋಕಸಭಾ ಸ್ಥಾನದ ಅನರ್ಹತೆ ಕಾರಣವಾಗಿತ್ತು.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ನ್ಯಾಯಾಲಯ ಸಮನ್ಸ್ ನೀಡಿದೆ. ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಅವರು ತಮ್ಮ “ಮೋದಿ ಉಪನಾಮ” ಟೀಕೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯ ಕುರಿತಾಗಿ ಹೇಳಿಕೆಯನ್ನ ದಾಖಲಿಸಿಲು ಏಪ್ರಿಲ್ 12 ರಂದು ಹಾಜರಾಗುವಂತೆ ಪಾಟ್ನಾ ನ್ಯಾಯಾಲಯ ಸಮನ್ಸ್ ನೀಡಿದೆ.
ಕರ್ನಾಟಕದಲ್ಲಿ 2019 ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಮೋದಿ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂದು ಹೇಳಿದರು. ನೀರವ್ ಮೋದಿ ಮತ್ತು ಲಲಿತ್ ಮೋದಿ ಹೆಸರಿನ ಜೊತೆಗೆ ನರೇಂದ್ರ ಮೋದಿ ಹೆಸರನ್ನೂ ತಿಳಿಸಿದ್ದು ವಿವಾದಕ್ಕೆ ಕಾರಣವಾಯಿತು.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಪಾಟ್ನಾ ಸಂಸದ-ಶಾಸಕ ನ್ಯಾಯಾಲಯಕ್ಕೂ ಹಾಜರಾಗಬಹುದಾದ ಸಾಧ್ಯತೆ ಇದೆ.
Modi Surname: Difficulty of Modi Surname Not Allowed to Rahul – Patna Court Issued Summons…