ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಾಳೆ ನಡೆಯಲಿರುವ ಮಹಿಳಾ ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಆಸ್ಟ್ರೇಲಿಯಾದ ಎರಡೂ ತಂಡಗಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದ ಶುಭಾಶಯವನ್ನು ಕೋರಿ ಅತ್ಯುತ್ತಮ ತಂಡ ಗೆಲ್ಲಲಿ ಎಂದು ಹಾರೈಸಿದ್ದಾರೆ.

ಇದಕ್ಕೂ ಮೊದಲು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮೆಲ್ಬೋರ್ನ್‌ನಲ್ಲಿ ಟಿ-20 ವರ್ಲ್ಡ್ ಕಪ್ ಗಾಗಿ ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳಾ ಕ್ರಿಕೆಟ್ ತಂಡಗಳು ಕಾದಾಡಲಿದೆ. ಎಂಸಿಜಿಯಲ್ಲಿ ಮೆಗಾ ಪ್ರೇಕ್ಷಕರ ಮುಂದೆ ಎರಡು ಶ್ರೇಷ್ಠ ತಂಡಗಳು. ಇದು ಎಲ್ಲಾ ರೀತಿಯಲ್ಲೂ ಅದ್ಭುತ ಪಂದ್ಯವಾಗಲಿದೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಇಷ್ಟೊಂದು ಪ್ರೇಕ್ಷಕರ ಸಮ್ಮುಖದಲ್ಲಿ ಆಡುವುದಕ್ಕಿಂತ ದೊಡ್ಡದು ಬೇರೇನೂ ಇರಲು ಸಾಧ್ಯವಿಲ್ಲ. ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಕ್ಕೂ ಶುಭ ಹಾರೈಸುತ್ತೇನೆ. ಜೊತೆಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ಉತ್ತಮ ತಂಡ ಗೆಲುವು ಸಾಧಿಸಲಿ. ಭಾರತ ಮಹಿಳಾ ತಂಡ ಬ್ಲೂ ಜರ್ಸಿಯಲ್ಲಿ ಆಡಲಿದ್ದು ಬ್ಲೂ ಮೌಂಟೇನ್ ತರ ಬ್ಲೂ ತಂಡ ಚಾಂಪಿಯನ್ ಆಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭಕೋರಿದ್ದಾರೆ.








