“ ಮೊಘಲರು ದುಷ್ಟರಲ್ಲ, ಅವರೇ ಈ ದೇಶ ಕಟ್ಟಿದ್ದು…” – ಕಬೀರ್ ಖಾನ್
ಮುಂಬೈ : ಮೊಘಲರು ಅಂದ ತಕ್ಷಣ ಬಹುತೇಕ ಭಾರತೀಯರು ಹೇಳೋದು ದುಷ್ಟರು.. ನಮ್ಮ ದೇಶವನ್ನ ಕಬಳಿಸಿದವರು ಅಂತ.. ಆದ್ರೆ ಬಾಲಿವುಡ್ ನಿರ್ದೇಶ ಕಬೀರ್ ಖಾನ್ ಅವರು ಇದೀಗ ನೀಡಿರುವ ಹೇಳಿಕೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತವನ್ನು ನೂರಾರು ವರ್ಷಗಳ ಕಾಲ ಆಳಿದ್ದ ಮೊಘಲರನ್ನು ದುಷ್ಟರಂತೆ ಬಿಂಬಿಸಿರುವ ಸಿನಿಮಾಗಳನ್ನು ವೀಕ್ಷಿಸಲು ತುಂಬಾ ಗೊಂದಲಕಾರಿಯಾಗುತ್ತದೆ. ಕೇವಲ ಜನಪ್ರಿಯತೆಗಾಗಿ ಸಿನಿಮಾ ಕಥೆಯನ್ನು ಹೆಣೆದಿರುತ್ತಾರೆ. ಅವುಗಳು ಐತಿಹಾಸಿಕ ಪುರಾವೆಗಳನ್ನು ಆಧರಿಸಿದ ಸಿನಿಮಾ ಕಥೆ ಆಗಿರುವುದಿಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಇತ್ತೀಚೆಗೆ ನೀಡಿರುವ ಸಂದರ್ಶನವೊಂದ್ರಲ್ಲಿ ಮಾತನಾಡಿರೋ ಕಬೀರ್ ಖಾನ್, ಮೊಘಲರನ್ನು ಕೆಟ್ಟದಾಗಿ ಬಿಂಬಿಸಿರುವ ಸಿನಿಮಾಗಳನ್ನು ನಾನು ಯಾವತ್ತೂ ಗೌರವಿಸುವುದಿಲ್ಲ. ಯಾಕೆಂದರೆ ಮೊಘಲರೇ ನಿಜವಾಗಿ ಈ ದೇಶವನ್ನು ಕಟ್ಟಿದ್ದು ಎಂದಿದ್ದಾರೆ. ಇನ್ನೂ ಕೆಟ್ಟ ರಾಜಕೀಯದಿಂದಾಗಿ ಯಾವುದೇ ಸಿನಿಮಾವನ್ನು ನಿರ್ಮಿಸಿದರೂ ನನಗೆ ಸಿಟ್ಟುಬರುತ್ತೆ. ಬಹುತೇಕರು ಕೆಲ ಸಂದರ್ಭಗಳಲ್ಲಿ ತಪ್ಪಾಗಿ ತಿಳಿದುಕೊಂಡಿರುತ್ತಾರೆ. ರಾಜಕೀಯ ಅಂದ ಕೂಡಲೇ ಅದೊಂದು ರಾಜಕೀಯ ಪಕ್ಷವಲ್ಲ. ರಾಜಕೀಯದ ಮೂಲಕ ನಾವು ಈ ಜಗತ್ತನ್ನು ನೋಡುವ ಒಂದು ಮಾರ್ಗವಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಕೇವಲ ಜನಪ್ರಿಯತೆಯ ನಿರೂಪಣೆಯೊಂದಿಗೆ ಸಿನಿಮಾವನ್ನು ನಿರ್ಮಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಸಿನಿಮಾ ನಿರ್ಮಾಪಕರು ಚಿತ್ರ ನಿರ್ಮಿಸುವ ಮೊದಲು ಕಥೆಯ ಬಗ್ಗೆ ಸಂಶೋಧನೆ ನಡೆಸಬೇಕು. ಒಂದು ವೇಳೆ ನಿಮಗೆ ಮೊಘಲರನ್ನು ದುಷ್ಟರಂತೆ ತೋರಿಸಬೇಕಿದ್ದರೂ ಕೂಡಾ ದಯವಿಟ್ಟು ಇತಿಹಾಸದ ಬಗ್ಗೆ ಅಧ್ಯಯನ ನಡೆಸಿ, ಸುಮ್ಮನೆ ಅನಗತ್ಯವಾಗಿ ಮೊಘಲರನ್ನು ವಿಲನ್ ಗಳಂತೆ ಬಿಂಬಿಸುತ್ತೀರಿ ಎಂದು ಕಿಡಿಕಾರಿದ್ದಾರೆ.