Hafeez : ಕೆಟ್ಟ ರಾಜಕೀಯದಿಂದ ಜನರಿಗೆ ತೊಂದರೆ.. ಮಾಜಿ ಕ್ರಿಕೆಟರ್ ಆಕ್ರೋಶ
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ತಮ್ಮದೇ ಶೈಲಿಯಲ್ಲಿ ಪಾಕಿಸ್ಥಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಸ್ತುತ ಪಾಕಿಸ್ತಾನ ಸರ್ಕಾರದ ಸ್ವಾರ್ಥ ರಾಜಕಾರಣಕ್ಕೆ ಸಾಮಾನ್ಯ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹಫೀಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮೊಹಮ್ಮದ್ ಹಫೀಜ್, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವಾರು ರಾಜಕಾರಣಿಗಳನ್ನು ಟ್ಯಾಗ್ ಮಾಡಿದ್ದಾರೆ.
“ಲಾಹೋರ್‌ನ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂಗಳಲ್ಲಿ ಹಣ ಬರುತ್ತಿಲ್ಲ.
ನಿಮ್ಮ ಕೆಟ್ಟ ರಾಜಕೀಯ ನಿರ್ಧಾರಗಳಿಗೆ ಸಾಮಾನ್ಯ ಜನರು ಏಕೆ ತೊಂದರೆಗೆ ಒಳಗಾಗಬೇಕು..?
ನನ್ನ ಪ್ರಶ್ನೆಗೆ ಈ ದೇಶದ ಸರ್ಕಾರ ಉತ್ತರಿಸಬೇಕು,” ಎಂದು ಅವರು ಟ್ವೀಟ್ ಮಾಡಿದ್ದಾರೆ.