Mohammad Siraj | ಮೊಹಮ್ಮದ್ ಸಿರಾಜ್ ಗೆ ಇಂದು ಜನ್ಮದಿನದ ಸಂಭ್ರಮ
ಟೀಂ ಇಂಡಿಯಾದ ರೈಸಿಂಗ್ ಸ್ಟಾರ್, ಆರ್ ಸಿಬಿ ತಂಡದ ಟ್ರಂಪ್ ಕಾರ್ಡ್ ಬೌಲರ್ ಮೊಹಮ್ಮದ್ ಸಿರಾಜ್ ಗೆ ಇಂದು ಜನ್ಮದಿನದ ಸಂಭ್ರಮ.
28ನೇ ವಸಂತಕ್ಕೆ ಕಾಲಿಟ್ಟ ಮೊಹಮ್ಮದ್ ಸಿರಾಜ್ ಅಭಿಮಾನಿಗಳು, ಸ್ನೇಹಿತರು ಸೋಶಿಯಲ್ ಮೀಡಿಯಾ ಮೂಲಕ ಶುಭಕೋರುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಸೋಶಿಯಲ್ ಮೀಡಿಯಾದಲ್ಲಿ ಬರ್ತ್ ಡೇ ವಿಶ್ ಮಾಡಿದೆ.
ಅಂದ ಹಾಗೇ ಮಹಮ್ಮದ್ ಸಿರಾಜ್ ಕಲ್ಲು ಮುಳ್ಳಿನ ಹಾದಿಯಲ್ಲಿ ಬೆಳೆದಿರುವ ಕ್ರಿಕೆಟಿಗ. 2015ರಲ್ಲಿ ಬೆಳಕಿಗೆ ಬಂದ ಮಹಮ್ಮದ್ ಸಿರಾಜ್ ರಣಜಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡಿದ್ದರು.
ಪರಿಣಾಮ, 2017ರಲ್ಲಿ ಟೀಮ್ ಇಂಡಿಯಾದ ಟಿ-ಟ್ವೆಂಟಿಯಲ್ಲಿ ಕಾಣಿಸಿಕೊಂಡ್ರು. ಆದ್ರೆ ಮಹಮ್ಮದ್ ಸಿರಾಜ್ ಅವರು ಟೀಮ್ ಇಂಡಿಯಾದ ಖಾಯಂ ಆಟಗಾರನಾಗಲು ವಿಫಲರಾಗಿದ್ದರು.
ಈ ನಡುವೆ, ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಪರ ಆಡಿದ್ದರು. ಬಳಿಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಿದ್ದಾರೆ.
2015ರಲ್ಲಿ ಹೈದ್ರಬಾದ್ ರಣಜಿ ತಂಡಕ್ಕೆ ಎಂಟ್ರಿಯಾದ ಮಹಮ್ಮದ್ ಸಿರಾಜ್ ಅದೃಷ್ಟ ಕೂಡ ಬದಲಾಗಿ ಹೋಯ್ತು..
ಅದಕ್ಕೆ ಕಾರಣ ಸನ್ ರೈಸರ್ಸ್ ಹೈದ್ರಬಾದ್ ತಂಡ. 2.60 ಕೋಟಿ ರೂಪಾಯಿಗೆ ಮಹಮ್ಮದ್ ಸಿರಾಜ್ ಅವರನ್ನು ಖರೀದಿ ಎಸ್ ಆರ್ ಎಚ್ ಖರೀದಿ ಮಾಡಿತ್ತು. ಇದು ಮಹಮ್ಮದ್ ಸಿರಾಜ್ ಅವರ ಅದೃಷ್ಟದ ಬಾಗಿಲು ಅನ್ನು ತೆರೆಯುವಂತೆ ಮಾಡಿತ್ತು.
ಐಪಿಎಲ್ ಹಣದಿಂದಲೇ ಸಿರಾಜ್ ಅವರು ಹೊಸ ಮನೆ ಕಟ್ಟಿಸಿದ್ರು. ತನ್ನ ತಂದೆ ಆಟೋ ರಿಕ್ಷಾ ಓಡಿಸಬಾರದು ಅಂತ ಮನ ಒಲಿಸಿದ್ರು.
ತನಗಾಗಿ ದುಡಿದಿದ್ದು ಸಾಕು.. ಇನ್ನೂ ಮುಂದೆ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಪ್ರೀತಿಯಿಂದಲೇ ಹೇಳಿದ್ರು ಮಹಮ್ಮದ್ ಸಿರಾಜ್.
ಹೊಸ ಮನೆಯ ಗೃಹ ಪ್ರವೇಶದ ವೇಳೆ ಮಹಮ್ಮದ್ ಸಿರಾಜ್ ಅವರು ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದರು.
ಆದ್ರೆ ಸಿರಾಜ್ ಆರ್ ಸಿಬಿ ಪರ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.
ಆದ್ರೆ ಕಳೆದೆರಡು ವರ್ಷದ ಐಪಿಎಲ್ ನಲ್ಲಿ ಸಿರಾಜ್ ವಿಶ್ವರೂಪವನ್ನ ತೋರಿಸಿದ್ದಾರೆ. ಹೀಗಾಗಿ ಅವರನ್ನ ಆರ್ ಸಿಬಿ ಫ್ರಾಂಚೈಸಿ ರಿಟೈನ್ಡ್ ಮಾಡಿಕೊಂಡಿದೆ.
ಇದಾದ ಬಳಿಕ ಟೀಂ ಇಂಡಿಯಾದಲ್ಲೂ ಸಿರಾಜ್ ಗಟ್ಟಿಯಾಗಿ ನೆಲೆಯೂರಿದ್ದಾರೆ. ಮೂರು ಮಾದರಿಯ ತಂಡದಲ್ಲಿ ಸಿರಾಜ್ ಖಾಯಂ ಸ್ಥಾನ ಪಡೆಯುತ್ತಿದ್ದಾರೆ. ಸಿರಾಜ್ ಬೌಲಿಂಗ್ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mohammad Siraj Birthday