ಕೊಹ್ಲಿ ಸೆಂಚೂರಿ ಸಿಡಿಸಿಲ್ಲ ಅಂದ್ರೆ ಏನಾಯ್ತು.. king always king
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಬಾರಿಸಿ ಸುಮಾರು ಎರಡು ವರ್ಷಗಳಾಗಿವೆ. mohammed-shami-defence-virat-kohli
ಅಂತಿಮವಾಗಿ 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಶತಕ ಸಿಡಿಸಿದ್ದರು. ಆದಾಗ್ಯೂ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಉತ್ತಮ ಟಚ್ ನಲ್ಲಿ ಕಾಣಿಸಿಕೊಂಡರು.
ಬ್ಯಾಕ್ ಟು ಬ್ಯಾಟ್ ಅರ್ಧ ಶತಕಗಳನ್ನು ಸಿಡಿಸಿದರು. ಆದ್ರೆ ಅವುಗಳನ್ನು ಶತಕಗಳಾಗಿ ಪರಿವರ್ತಿಸುವಲ್ಲಿ ವಿರಾಟ್ ಕೊಹ್ಲಿ ವಿಫಲರಾದರು.
ಹೀಗಾಗಿ ಕೆಲವರು ಕೊಹ್ಲಿ ಫಾರ್ಮ್ ಬಗ್ಗೆ ಟೀಕೆ ಮಾಡುತ್ತಿದ್ದರೆ, ಇನ್ನು ಕೆಲವರು ಕೊಹ್ಲಿಯನ್ನು ಬೆಂಬಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ, ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.
ವಿರಾಟ್ ಕೊಹ್ಲಿ ಸೆಂಚೂರಿ ಸಿಡಿಸಿಲ್ಲ ಅಂದ್ರೆ ಏನಾಯ್ತು..? ಯಾವುದೋ ಒಂದು ಸೆಂಚೂರಿ ವಿರಾಟ್ ಎಷ್ಟು ದೊಡ್ಡ ಆಟಗಾರ ಎಂಬುವುದನ್ನ ನಿರೂಪಿಸುವುದಿಲ್ಲ.
ವಿರಾಟ್ ಕೊಹ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ಅವರು ಇತ್ತೀಚೆಗೆ ಸತತ ಅರ್ಧಶತಕಗಳನ್ನು ಸಾಧಿಸಿದ್ದಾರೆ.
ಅವರು ಗಳಿಸುವ ಅರ್ಧಶತಕ, ಅದಕ್ಕಿಂತ ಹೆಚ್ಚು ರನ್ ಗಳು ತಂಡಕ್ಕಾಗಿಯೇ ಆಗಿದೆ. ಹೀಗಿದ್ದಾಗ ಅವರನ್ನು ಟೀಕಿಸುವ ಅಗತ್ಯವಿಲ್ಲ ಎಂದು ಟೀಕಾಕರರಿಗೆ ಶಮಿ ಟಾಂಗ್ ನೀಡಿದ್ದಾರೆ.
ಇನ್ನು ವಿರಾಟ್ ಯಾರ ಮಾತು ಕೇಳುವುದಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಶಮಿ, ವಿರಾಟ್ ಕೊಹ್ಲಿಗೆ ತುಂಬಾ ಎನರ್ಜಿ ಇದೆ. ಅವರು ತಮ್ಮ ಎನರ್ಜಿಯಿಂದ ತಂಡವನ್ನು ಮುನ್ನಡೆಸುತ್ತಾರೆ.
ಆತ ಬೌಲರ್ ಗಳ ಕ್ಯಾಪ್ಟನ್, ವಿರಾಟ್ ಎಂದೂ ನಮ್ಮ ಅಭಿಪ್ರಾಯವನ್ನು ನಿರ್ಲಕ್ಷಿಸಿಲ್ಲ. ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳಿದ್ದಾರೆ.