Mohammed Shami | ಬುಮ್ರಾ ಸ್ಥಾನದಲ್ಲಿ ಆತನಿಗೆ ಅವಕಾಶ ನೀಡಿ
ಆಸ್ಟ್ರೇಲಿಯಾ ವೇದಿಕೆಯಾಗಿ ನಡೆಯಲಿರುವ ಟಿ 20 ವಿಶ್ವಕಪ್ 2022 ಗೆ ಟೀಂ ಇಂಡಿಯಾದ ವೇಗಿ ಜಸ್ ಪ್ರಿತ್ ಬುಮ್ರಾ ಅವರು ಗಾಯದ ಸಮಸ್ಯೆಯಿಂದಾಗಿ ದೂರವಾಗಿದ್ದಾರೆ.
ಹೀಗಾಗಿ ವಿಶ್ವ ಸಂಗ್ರಾಮದಲ್ಲಿ ಟೀಂ ಇಂಡಿಯಾದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ತಂಡದಲ್ಲಿ ಹಿರಿಯ ಬೌಲರ್ ಭುವನೇಶ್ವರ್ ಕುಮಾರ್ ಇದ್ದರೂ ಅವರು ದೆತ್ ಓವರ್ ಗಳಲ್ಲಿ ದುಬಾರಿಯಾಗುತ್ತಿದ್ದಾರೆ. ಇದು ತಂಡಕ್ಕೆ ಹಿನ್ನಡೆಗೆ ಕಾರಣವಾಗಿದೆ.
ಇದು ಹೀಗಿದ್ದರೂ ಐಸಿಸಿ ಮೆಗಾ ಈವೆಂಟ್ ನಲ್ಲಿ ಬುಮ್ರಾ ಸ್ಥಾನವನ್ನು ಭರ್ತಿ ಮಾಡುವ ಸಾಮರ್ಥ್ಯ ಹಿರಿಯ ವೇಗಿ ಮೊಹ್ಮದ್ ಶಮಿಗೆ ಇದೆ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸಬಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.
ಮೊಹ್ಮದ್ ಶಮಿ ಅದ್ಭುತವಾದ ವೇಗದ ಬೌಲರ್. ಆತನಿಗೆ ಟಿ 20 ಫಾರ್ಮೆಟ್ ನಲ್ಲಿ ಹೊಸ ಚೆಂಡಿನಲ್ಲಿ ವಿಕೆಟ್ ತೆಗೆಯುವ ಸಾಮರ್ಥ್ಯವಿದೆ.
ಅದೇ ರೀತಿಯಾಗಿ ದೆತ್ ಓವರ್ ಗಳಲ್ಲಿ ಶಮಿ ಬಿಗುವಿನ ದಾಳಿ ನಡೆಸುತ್ತಾರೆ. ಈ ವರ್ಷ ಐಪಿಎಲ್ ನಲ್ಲಿ ಶಮಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ತಂಡಕ್ಕೆ ಅವರ ಅವಶ್ಯಕತೆ ಇದೆ.
ಒಂದು ವೇಳೆ ಶಮಿ ಅವರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡದಿದ್ದರೇ ಭಾರತದ ಬೌಲಿಂಗ್ ಮತ್ತಷ್ಟು ವೀಕ್ ಆಗಲಿದೆ.
ಬುಮ್ರಾ ತಂಡದಿಂದ ದೂರವಾಗಿರುವುದು ಭಾರತ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಆದ್ರ ಆತನ ಸ್ಥಾನವನ್ನು ತುಂಬುವ ಶಕ್ತಿ ಶಮಿಗಿದೆ.
ಟೀಂ ಮ್ಯಾನೇಜ್ ಮೆಂಟ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಕರೀಂ ಹೇಳಿದ್ದಾರೆ.