Mohmad Siraj | ಸಾಕಪ್ಪಾ ಸಾಕು ಸಿರಾಜ್ ಸಹವಾಸ..!!
ಮೊಹಮ್ಮದ್ ಸಿರಾಜ್..!! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂಬಿಕಸ್ಥ ಬೌಲರ್. ಆರ್ ಸಿಬಿಯ ವೇಗದ ಬೌಲಿಂಗ್ ವಿಭಾಗದ ಸಾರಥಿ. ಕಳೆದ ವರ್ಷದ ಇಂಡಿಯನ್ ಪ್ರಿಮಿಯಲ್ ಲೀಗ್ ಪ್ರದರ್ಶನದಿಂದ ಸಿರಾಜ್ ಅವರನ್ನ ಬೆಂಗಳೂರು ಫ್ರಾಂಚೈಸಿ ರಿಟೇನ್ ಮಾಡಿಕೊಂಡಿತ್ತು. ಯಜುವೇಂದ್ರ ಚಹಾಲ್ ಅವರನ್ನು ಬಿಟ್ಟು ಸಿರಾಜ್ ಗೆ ಬೆಂಗಳೂರು ತಂಡ ಮಣೆ ಹಾಕಿದ್ದು, ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಆದ್ರೆ ಎಲ್ಲೋ ಒಂದು ಕಡೆ ಸಿರಾಜ್ ಉತ್ತಮ ಪ್ರದರ್ಶನ ನೀಡ್ತಾರೆ ಅಂತಾ ಆರ್ ಸಿಬಿ ಅಭಿಮಾನಿಗಳು ಭಾವಿಸಿದ್ದರು.
ಆದ್ರೆ ಮೊಹಮ್ಮದ್ ಸಿರಾಜ್ ಈ ಬಾರಿಯ ಐಪಿಎಲ್ ನಲ್ಲಿ ಮಕಾಡೆ ಮಲಗಿದ್ದಾರೆ. ವಿಕೆಟ್ ತೆಗೆಯೋದನ್ನ ಬಿಡಿ ಕನಿಷ್ಠ ರನ್ ಗಳಿಗೆ ಕಡಿವಾಣ ಹಾಕೋಕು ಕೂಡ ಸಿರಾಜ್ ಕೈಯಲ್ಲಿ ಆಗ್ತಿಲ್ಲ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿನ್ನಡೆಗೆ ಕಾರಣವಾಗಿದೆ.
ಹೌದು..!! ಸಿರಾಜ್ ಆರ್ ಸಿಬಿ ತಂಡದ ವೇಗದ ಬೌಲಿಂಗ್ ವಿಭಾಗದ ಸಾರಥಿಯಾಗ್ತಾರೆ ಅಂತಾ ಅವರನ್ನ ಬೆಂಗಳೂರು ಫ್ರಾಂಚೈಸಿ ರಿಟೈನ್ ಮಾಡಿಕೊಂಡಿತ್ತು. ಆದ್ರೆ ಸಿರಾಜ್ ತಮ್ಮ ಜವಾಬ್ದಾರಿಯನ್ನು ಮರೆತು ಬೌಲಿಂಗ್ ಮಾಡ್ತಿದ್ದಾರೆ. ಪವರ್ ಪ್ಲೇ ನಲ್ಲಿ ಮಾರಕ ದಾಳಿ ನಡೆಸಿ ತಂಡಕ್ಕೆ ಬ್ರೇಕ್ ಥ್ಯ್ರೂ ತಂದುಕೊಡಬೇಕಿದ್ದ ಸಿರಾಜ್, ಧಾರಾಳವಾಗಿ ರನ್ ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಇದಲ್ಲದೇ ಕೊನೆಯ ಓವರ್ ಗಳಲ್ಲಿ ರನ್ ಗಳಿಗೆ ಕಡಿವಾಣ ಹಾಕೋದನ್ನ ಬಿಟ್ಟು, ಬೌಂಡರಿ, ಸಿಕ್ಸರ್ ಗಳನ್ನ ಹೊಡೆಸಿಕೊಳ್ಳುತ್ತಿದ್ದಾರೆ.
ಸಿರಾಜ್ ಅವರ ಈ ಬಾರಿಯ ಪ್ರದರ್ಶನ ನೋಡಿದ್ರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಸಿರಾಜ್, ನಾಲ್ಕು ಓವರ್ ಬೌಲ್ ಮಾಡಿ 37 ರನ್ ನೀಡಿದರು. ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ನಾಲ್ಕು ಓವರ್ ಎಸೆದು ಬರೋಬ್ಬರಿ 51 ರನ್ ಬಿಟ್ಟುಕೊಟ್ಟರು. ಈ ಪಂದ್ಯದಲ್ಲೂ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲೂ ನಾಲ್ಕು ಓವರ್ ಬೌಲಿಂಗ್ ಮಾಡಿ ಒಂದು ವಿಕೆಟ್ ಪಡೆಯದೇ 43 ರನ್ ನೀಡಿದರು. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಔವರ್ ಎಸೆದು 25 ರನ್ ನೀಡಿ 1 ವಿಕೆಟ್ ಪಡೆದರು. ಪಂಜಾಬ್ ವಿರುದ್ದದ ಪಂದ್ಯದಲ್ಲಿ 59 ರನ್ ನೀಡಿ 2 ವಿಕೆಟ್ ಪಡೆದರು.
ಒಟ್ಟಾರೆ ಸಿರಾಜ್ ಐದು ಪಂದ್ಯಗಳಲ್ಲಿ ಮೂರು ವಿಕೆಟ್ ಮಾತ್ರ ಪಡೆದಿದ್ದಾರೆ. 215 ರನ್ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಸಿರಾಜ್ ಮೇಲೆ ಮುನಿಸಿಕೊಂಡಿದ್ದು, ಬೇರೊಬ್ಬರಿಗೆ ಅವಕಾಶ ಕೊಟ್ಟರೇ ಒಳ್ಳೆಯದು ಅಂತಾ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. mohammed siraj bad performance in ipl 2022









