ಬಿಬಿಎಂಪಿಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ವರ್ಷಕ್ಕೆ 3 ಲಕ್ಷ ಹಣ ಉಳಿಸುತ್ತೇವೆ: ಮೋಹನ್ ದಾಸರಿ
ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದರೆ, ದೆಹಲಿ ಮಾದರಿಯಲ್ಲಿ ಉಚಿತ ವಿದ್ಯುತ್, ನೀರು, ಅಂತರರಾಷ್ಟ್ರೀಯ ಮಟ್ಟದ ಸರ್ಕಾರಿ ಶಾಲೆ, ಉತ್ತಮ ಆರೋಗ್ಯ ವ್ಯವಸ್ಥೆ ಹೀಗೆ ಜನಸಾಮಾನ್ಯನಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದರ ಮೂಲಕ ಪ್ರತಿ ಕುಟುಂಬದ 3 ಲಕ್ಷದಷ್ಟು ಹಣ ಉಳಿಸುತ್ತೇವೆ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಭರವಸೆ ನೀಡಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮುಖಂಡರ, ಕಾರ್ಯಕರ್ತರ, ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೆರಳೆಣಿಕೆಯಷ್ಟು ಜನ ಬೆಂಬಲಿಗರು ಇದ್ದಂತಹ ಬೆಂಗಳೂರು ನಗರದಲ್ಲಿ ಈಗ ಲಕ್ಷಾಂತರ ಜನ ಬೆಂಬಲಿಗರು ಆಮ್ ಆದ್ಮಿ ಪಕ್ಷದ ಜತೆ ಇದ್ದಾರೆ.
ಬರುವ ಬಿಬಿಎಂಪಿ ಚುನಾವಣೆ ಹೊತ್ತಿಗೆ ಆಮ್ ಆದ್ಮಿ ಪಕ್ಷವನ್ನು ಮತ್ತಷ್ಟು ಬಲ ಪಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ಮಾತನಾಡಿ, ಪ್ರತಿ ಭಾರಿ ಕರ್ನಾಟಕಕ್ಕೆ ಭೇಟಿ ನೀಡಿದಾಗಲೂ ರೋಚಕ ಅನುಭವಗಳು ಆಗುತ್ತಿವೆ.
ಪ್ರತಿ ಭಾರಿ ಬಂದಾಗಲೂ ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷ ಗೆದ್ದೆ ಗೆಲ್ಲುತ್ತದೆ ಎನ್ನುವ ಭರವಸೆ ಹಿಮ್ಮಡಿಯಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶೂನ್ಯ ಕಲಿಕಾ ರಹಿತ ವರ್ಷ ಮಾಡಲು ಶಾಸಗಿ ಶಾಲೆಗಳ ವಿರೋಧ…!
ಬಿಬಿಎಂಪಿಯಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಮಹಿಳೆಯರು ತೆಗೆದುಕೊಳ್ಳಬೇಕು. ಏಕೆಂದರೆ ಆಮ್ ಆದ್ಮಿ ಪಕ್ಷ ಗೆದ್ದರೆ ಮೊದಲು ಉಪಯೋಗವಾಗುವುದು ಮಹಿಳೆಯರಿಗೆ ಎಂದು ಹೇಳಿದರು.
ರಾಜ್ಯ ಸಹ ಸಂಚಾಲಕ ವಿಜಯ್ ಶರ್ಮ, ಉಪಾಧ್ಯಕ್ಷ ಸುರೇಶ್ ರಾಥೋಡ್, ದಾಸರಹಳ್ಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಎಂ.ವೆಂಕಟೇ ಗೌಡ, ಮುಖಂಡರಾದ ಮಾಯಾ ಪ್ರದೀಪ್, ಹರೀಶ್ ಇದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel