ಡೆಂಗ್ಯೂ, ಚಿಕುನ್‌ಗುನ್ಯಾ ನಿಯಂತ್ರಣಕ್ಕೆ ಶೀಘ್ರ ಕ್ರಮ ಕೈಗೊಳ್ಳಿ: ಮೋಹನ್ ದಾಸರಿ ಆಗ್ರಹ ( Mohan Dasari )
ಬೆಂಗಳೂರು : ಡೆಂಗ್ಯೂ ಹಾಗೂ ಚಿಕುನ್‌ಗುನ್ಯ ಪ್ರಕರಣಗಳು ಬೆಂಗಳೂರು ನಗರದಾದ್ಯಂತ ವ್ಯಾಪಕವಾಗಿ ವರದಿಯಾಗುತ್ತಿದ್ದು ಈ ರೋಗಗಳ ನಿಯಂತ್ರಣಕ್ಕೆ ಬಿಜೆಪಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ( Mohan Dasari ) ಒತ್ತಾಯಿಸಿದರು.
ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಇದೇ ಸಮಯಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ 698 ಪ್ರಕರಣಗಳು ಪತ್ತೆಯಾಗಿದ್ದವು.
ಆದರೆ, ಈ ಪ್ರಸ್ತುತ ವರ್ಷದಲ್ಲಿ ಡೆಂಗಿ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲೇ 8 ಸಾವಿರಕ್ಕೂ ಅಧಿಕ ಮಂದಿ ಬಳಲಿದ್ದರು.
2014ರಿಂದ ಡೆಂಗಿ ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದು, 2018ರಲ್ಲಿ ನಿಯಂತ್ರಣಕ್ಕೆ ಬಂದಿತ್ತು. ಈ ವರ್ಷ ಕೊರೋನಾ ಜತೆಗೆ ಇದು ಸೇರಿಕೊಂಡರೆ ಜನರ ಬದುಕು ಮೂರಾಬಟ್ಟೆ ಆಗುವುದು ಖಚಿತ ಎಂದರು.
ಶಾಲೆಗಳ ಪುನಾರಂಭ ಬಗ್ಗೆ ತೀರ್ಮಾನ ಆಗಿಲ್ಲ; ಸುರೇಶ್ ಕುಮಾರ್ ಸ್ಪಷ್ಟನೆ
ಬಿಬಿಎಂಪಿ ದೆಹಲಿ ಸರ್ಕಾರದ ಮಾದರಿಯಲ್ಲಿ 10 ಗಂಟೆ 10 ನಿಮಿಷ, 10 ಸೆಕೆಂಡ್ ಯೋಜನೆಯಂತೆ ಡೆಂಗ್ಯೂ ಹಾಗೂ ಚಿಕುನ್‌ಗುನ್ಯಾ ತಡೆಗೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಇಲಾಖೆಯ ನೇತೃತ್ವವಹಿಸಿದ ಮೇಲೆ ಕೊರೋನಾ ವರದಿಗಳು ಕಡಿಮೆ ಆಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ನಾನು ಬಂದ ಮೇಲೆ ಸೋಂಕು ನಿಯಂತ್ರಿಸಿದೆ ಎನ್ನುವ ಪ್ರತಿಷ್ಟೆಗೆ ಬಿದ್ದಿರುವ ಸಚಿವರು ಸಾಕಷ್ಟು ಪ್ರಮಾಣದಲ್ಲಿ ಕೊರೋನಾ ಟೆಸ್ಟ್ ಗಳು ಮಾಡುವುದನ್ನು ನಿಲ್ಲಿಸಿದ್ದಾರೆ.
ಪ್ರತಿಷ್ಠೆಯನ್ನು ಬಿಟ್ಟು ಸಚಿವರು ಜನರ ಪ್ರಾಣ ರಕ್ಷೆಣೆಗೆ ಯಾವ ಕ್ರಮ ಕೈಗೊಳ್ಳಬೇಕೊ ಅದನ್ನು ಮಾಡಲಿ ಎಂದು ವ್ಯಂಗ್ಯವಾಡಿದರು.
ಬೆಂಗಳೂರು ಸುತ್ತ ಮುತ್ತಲಿನ ಕೆರೆಗಳು ಉತ್ತಮ ಮಳೆಗೆ ತುಂಬಿವೆ ಹಾಗೂ ಖಾಲಿ ನಿವೇಶನಗಳಲ್ಲಿ ಹಸಿರು ಹೆಚ್ಚಾಗಿರುವ ಕಾರಣ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣ ಮೀರಿದೆ.
ಪಿಜಿ, ಡಿಗ್ರಿ ಕ್ಲಾಸ್ ಆರಂಭಕ್ಕೆ ಮಹಿಳಾ ವಿವಿ ಸಜ್ಜು; ನ.17ಕ್ಕೆ ಡೇಟ್ ಫಿಕ್ಸ್..!
ಈ ಕೂಡಲೇ ಬಿಬಿಎಂಪಿ ಆರೋಗ್ಯ ವಿಭಾಗ ಹಾಗೂ ಆರೋಗ್ಯ ಸಚಿವರು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೊರೋನಾ ವಾರಿಯರ್ಸ್‌ಗಳನ್ನು ಸೋಂಕು ನಿಯಂತ್ರಣಕ್ಕೆ ನೇಮಿಸಿದಂತೆ ಈ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










