Mohsin Khan : ಮೊಹ್ಸಿನ್ ಖಾನ್ ಬಗ್ಗೆ ಶಮಿ ಮೆಚ್ಚುಗೆ
ಇಂಡಿಯನ್ ಪ್ರಿಮಿಯರ್ ಲೀಗ್ 2022ರಲ್ಲಿ ತಮ್ಮ ಬೌಲಿಂಗ್ ಮೂಲಕ ಉತ್ತರ ಪ್ರದೇಶದ ಯುವ ಕ್ರಿಕೆಟರ್ ಮೊಹ್ಸಿನ್ ಖಾನ್ ಎಲ್ಲರ ಗಮನ ಸೆಳೆದರು.
ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದ ಮೊಹ್ಸಿನ್ ಖಾನ್, 5.96 ಎಕನಾಮಿಯಲ್ಲಿ 14.07 ರ ಸರಾಸರಿಯಲ್ಲಿ 14 ವಿಕೆಟ್ ಪಡೆದರು.
ಹೀಗೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಮೊಹ್ಸಿನ್ ಖಾನ್ ಹಲವರ ಗಮನ ಸೆಳೆದಿದ್ದಾರೆ.
ಅದರಲ್ಲಿ ಮೊಹ್ಮದ್ ಶಮಿ ಕೂಡ ಇದ್ದಾರೆ. ಮೊಹ್ಸಿನ್ ಖಾನ್ ಪ್ರತಿಭೆಗೆ ಶಮಿ ಫಿದಾ ಆಗಿದ್ದಾರೆ ಎಂದು ಮೊಹ್ಸಿನ್ ಖಾನ್ ಬರುದ್ಧೀನ್ ಸಿದ್ಧಿಖಿ ಹೇಳಿದ್ದಾರೆ.
ಐಪಿಎಲ್ ಮೆಗಾ ಹರಾಜು ಸಂದರ್ಭದಲ್ಲಿ “ನಾನು ಶಮಿ ಅವರ ತೋಟದ ಮನೆಯಲ್ಲಿದ್ದೆ.
ಶಮಿ ಸೇಲ್ ಆಗಿದ್ದಾರೆ ಅಂತಾ ತಿಳಿಯಿತು. ಹಾಗೇ ಲಕ್ನೋ ಮೊಹ್ಸಿನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿದ್ದು ತಿಳಿಯಿತು.
ಈ ವಿಷಯ ಗೊತ್ತಾಗುತ್ತಿದ್ದಂತೆ ನನಗೆ ನಾಲ್ಕು ತಿಂಗಳ ಸಮಯವನ್ನ ನೀಡಿ. ಮೊಹ್ಸಿನ್ ಖಾನ್ ಅವರನ್ನ ಇಂಡಿಯಾದಲ್ಲಿಯೇ ಅತ್ಯುತ್ತಮ ಆಲ್ ರೌಂಡರ್ ಆಗಿ ಮಾಡುತ್ತೇನೆ.
ನಿಜ ಹೇಳಬೇಕಾದ್ರೆ ಮೊಹ್ಸಿನ್ ಖಾನ್ ಒಳ್ಳೆ ಬ್ಯಾಟರ್. ಪರಿಸ್ಥಿತಿಗೆ ಅರ್ಥ ಮಾಡಿಕೊಂಡು ಆಡುತ್ತಾರೆ ಎಂದು ಕೆ.ಎಲ್.ರಾಹುಲ್ ಕೂಡ ಹೇಳಿದ್ದಾರೆ ಅಂತಾ ಶಮಿ ನನಗೆ ಹೇಳಿದ್ರೂ ಎಂದು ಸಿದ್ಧಿಖಿ ಬಹಿರಂಗಗೊಳಿಸಿದ್ದಾರೆ.
ಯುವ ಆಟಗಾರರನ್ನು ಪ್ರೋತ್ಸಾಹಿಸುವುರಲ್ಲಿ ಶಮಿ ಸದಾ ಮುಂದೆ ಇರುತ್ತಾರೆ ಎಂದು ಸಿದ್ಧಿಖಿ ಹೇಳಿದ್ದಾರೆ.