ಮಲಯಾಳಂನ ಖ್ಯಾತ ನಟ ದುಲ್ಖರ್ ಸಲ್ಮಾನ್ ಕೊರೊನಾ ಪಾಸಿಟಿವ್

1 min read

ಮಲಯಾಳಂನ ಖ್ಯಾತ ನಟ ದುಲ್ಖರ್ ಸಲ್ಮಾನ್ ಕೊರೊನಾ ಪಾಸಿಟಿವ್

ಕೇರಳ : ಮಲಯಾಳಂನ ಖ್ಯಾತ ನಟ ದುಲ್ಖರ್ ಸಲ್ಮಾನ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನೂ ಇತ್ತೀಚೆಗಷ್ಟೇ ಮಾಲಿವುಡ್ ನ ಸೂಪರ್ ಸ್ಟಾರ್ ಮಮ್ಮುಟಿಗೆ ಕೊರೊನಾ ಸೋಂಕು ದೃಢ ಪಟ್ಟ ಬೆನ್ನಲ್ಲೇ ದುಲ್ಖರ್ ಸಲ್ಮಾನ್ ಅವರಿಗೆ ಪಾಸಿಟಿವ್ ಬಂದಿದೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ದುಲ್ಖರ್ , ನನಗೆ ಕೊರೊನಾ ಸೋಂಕು ದೃಢವಾಗಿದೆ. ನಾನು ಮನೆಯಲ್ಲೇ ಐಸೋಲೇಶನ್ ನಲ್ಲಿದ್ದೇನೆ. ಸೌಮ್ಯ ರೋಗಲಕ್ಷಣಗಳಿದೆ. ಆದ್ರೆ ಆರಾಮಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಚಿತ್ರೀಕರಣದ ಸಮಯದಲ್ಲಿ ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ದಯವಿಟ್ಟು ಕ್ವರಂಟೈನ್ ನಲ್ಲಿರಿ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಸಿಬಿಐ 5ಶೂಟಿಂಗ್ ವೇಳೆ 70 ವರ್ಷದ ಮಮ್ಮುಟಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಕುರಿತಂತೆ ಅವರು ಸಹ ತಮ್ಮ ಟ್ವಿಟ್ಟರ್‌ ಮೂಲಕ ಮಾಹಿತಿ ನೀಡಿದ್ದರು..  ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ನನಗೆ ಕೊರೊನಾ ದೃಢಪಟ್ಟಿದೆ. ಲಘು ರೋಗಲಕ್ಷಣಗಳಿದೆ. ಆದರೂ ಆರಾಮಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ನಾನು ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಿದ್ದೇನೆ, ನೀವೂ ಜಾಗರೂಕರಾಗಿರಿ ಎಂದು ತಿಳಿಸಿದ್ದರು..

ಅಂದ್ಹಾಗೆ ಇತ್ತೀಚೆಗೆ ಎಲ್ಲಾ ಸಿನಿಮಾ ರಂಗದ ಸಾಕಷ್ಟು ಮಂದಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ.. ಅನೇಕರು ಕ್ವಾರಂಟೈನ್ನಲ್ಲಿದ್ರೆ ,, ಇನ್ನೂ ಕೆಲವರು ಗುಣಮುಖರಾಗಿದ್ದಾರೆ.. ಇನ್ನ ಭಾರತೀಯ ಸಿನಿಮಾರಂಗದ  ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೂ ಕೊರೊನಾ ದೃಢಪಟ್ಟಿದ್ದು ಅವರು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.. ಆದ್ರೆ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಗಂಭೀರವಾಗಿದ್ದು , ಅವರಿಗೆ ಸುಮಾರು 12 ದಿನಗಳಿಂದಲೂ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.. ಇನ್ನೂ ಸುಮಾರು 12 ದಿನಗಳಕಾಲ ಅವರಿಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಸಬೇಕಾಗುತ್ತದೆ ಎಂದು ಅವರಿಗೆ ಚಿಕಿತ್ಸೆ ನೀಡ್ತಿರುವ ವೈದ್ಯರು ಇತ್ತೀಚೆಗೆ ಮಾಹಿತಿ ನೀಡಿದ್ದರು..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd