ರಸ್ತೆ ದಾಟಲು ಹೋಗಿ ಬೈಕ್ ಚಕ್ರಕ್ಕೆ ಸಿಲುಕಿದ ಕೋತಿ – ಸ್ಥಳಿಯರಿಂದ ರಕ್ಷಣೆ..
ಬೈಕ್ ನ ಚಕ್ರಕ್ಕೆ ಸಿಲುಕಿದ್ದ ಕೋತಿಯೊಂದನ್ನ ಉಳಿಸಲು ಜನರ ಗುಂಪು ಸ್ಥಳಿಯರು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಾರಾಬಂಕಿಯ ಬಡೋಸರೈ ಪ್ರದೇಶದಲ್ಲಿ ಕೋತಿ ರಸ್ತೆ ದಾಟಲು ಯತ್ನಿಸಿದ ಘಟನೆ ನಡೆದಿದೆ.
#Viralvideo A monkey gets stuck in one of the wheels of a speeding motorcycle while crossing a road in UP’s Barabanki. People rushed in to rescue the monkey immediately. pic.twitter.com/45WtQs53bD
— India.com (@indiacom) November 9, 2022
ಕೋತಿ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ವೇಗವಾಗಿ ಬಂದ ಬೈಕ್ ಚಕ್ರಕ್ಕೆ ಸಿಲಿಕಿದೆ. ಅದೃಷ್ಟವಶಾತ್ ವ್ಯಕ್ತಿ ಸರಿಯಾದ ಸಮಯಕ್ಕೆ ಬ್ರೇಕ್ ಹಾಕಿದ್ದರಿಂದ ಕೋತಿ ಜೀವಂತವಾಗಿ ಉಳಿದಿದೆ,
ವಿಡಿಯೋದಲ್ಲಿ ಕೋತಿ ಮುಂಭಾಗ ವೀಲ್ ಗೆ ಸಿಲುಕಿಕೊಂಡಿರುವುದನ್ನ ನೋಡಬಹುದು. ಸ್ಥಳಿಯರು ಮಾನವೀಯತರೆ ಮೆರೆದು ಮುಂದಿನ ಟೈಯರ್ ಬಿಚ್ಚಿ ಕೋತಿಯನ್ನ ಬದುಕಿಸಿದ್ದಾರೆ.
Monkey Gets Stuck In Speeking Bike’s Wheel, Clip Goes Viral As People Rush To Its Rescue