ಒಂದೆಡೆ ಕೋವಿಡ್ ಆತಂಕ ಮತ್ತೆ ವಿಶ್ವಾದ್ಯಂತ ಮನೆ ಮಾಡಿದೆ.. ಅಲ್ಲದೇ ಮಂಕಿ ಪಾಕ್ಸ್ ಪ್ರಕರಣ ದಿನೇ ದಿನೇ ಹೆಚ್ಚಾಗ್ತಿದೆ.. ಇದೆಲ್ಲದರ ನಡುವೆ ಇದೀಗ ಮತ್ತೊಂದು ಆತಂಕಕಾರಿ ವಿಚಾರ ಬಹಿರಂಗವಾಗಿದೆ..
ಅದೇನೆಂದ್ರೆ ಪ್ರಾಣಿಗಳಿಗೂ ಮಂಕಿಪಾಕ್ಸ್ ಹಬ್ಬುತ್ತದೆ ಎಂಬುದು..
ಹೌದು..! ಫ್ರಾನ್ಸ್ ನಲ್ಲಿ ನಾಯಿಯೊಂದರಲ್ಲಿ ಸೋಂಕು ದೃಢಪಟ್ಟಿದೆ.. ಇದೇ ಮೊದಲ ಬಾರಿಗೆ ನಾಯಿಗೂ ಮಂಕಿಪಾಕ್ಸ್ ಸೋಂಕು ತಗುಲಿರುವುದನ್ನು ಫ್ರೆಂಚ್ ಸಂಶೋಧಕರು ದೃಢಪಡಿಸಿದ್ದಾರೆ.
ಮಾನವರಿಂದಲೇ ನಾಯಿಗೂ ಸೋಂಕು ಹರಡಿರುವುದಾಗಿ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ವರದಿಗಳ ಪ್ರಕಾರ, ಸೋಂಕಿತ ನಾಯಿಯ ಮಾಲೀಕ ಸಲಿಂಗಕಾಮಿಯಾಗಿದ್ದು, ಅವರಲ್ಲಿ 12 ದಿನಗಳ ಹಿಂದೆ ಮಂಕಿಪಾಕ್ಸ್ ಲಕ್ಷಣ ಕಂಡುಬಂದಿತ್ತು. ಮಾಲೀಕರೊಂದಿಗೇ ಯಾವಾಗಲೂ ಇರುತ್ತಿದ್ದ ನಾಯಿಯಲ್ಲೂ ರೋಗದ ಲಕ್ಷಣಗಳು ಕಂಡುಬಂದಿದೆ ಎಂದು ಹೇಳಲಾಗ್ತಿದೆ.
ನಾಯಿಯ ಮೈಯಲ್ಲೂ ಕೀವು ಇರುವ ಗುಳ್ಳೆಗಳು ಕಂಡುಬಂದಿದ್ದು, ಹೀಗಾಗಿ ನಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಕಿಪಾಕ್ಸ್ ಸೋಂಕು ಅದಕ್ಕೂ ತಗುಲಿರುವುದು ತಿಳಿದುಬಂದಿದೆ.