ರುಚಿಯೂ ಇದೆ ಆರೋಗ್ಯವೂ ಇದೆ. ಮಳೆಗಾಲದ ವಿಶೇಷ ಹರ್ಬಲ್ ಟೀ…
ಮಳೆಗಾಲದ ಈ ಮಳೆ, ತಂಪುಗಾಳಿ ದೇಹಕ್ಕೆ ಉಲ್ಲಾಸ ಕೊಡುತ್ತದೆ. ಮನಸ್ಸಿಗೂ ಹಿತವೆನಿಸುತ್ತದೆ. ಆದರೆ ಹಲವು ರೋಗಗಳು ಹರಡುವುದಕ್ಕೂ ಕಾರಣವಾಗುತ್ತದೆ. ಈ ಋತುವಿನಲ್ಲಿ, ಅನೇಕ ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್ಗಳು ಪರಿಸರದಲ್ಲಿ ಬೆಳೆಯಲು ಮತ್ತು ಹರಡಲು ಪ್ರಾರಂಭಿಸುತ್ತವೆ, ಇದರಿಂದಾಗಿ ವ್ಯಕ್ತಿಯ ರೋಗನಿರೋಧಕ ಶಕ್ತಿ ಕುಂಠಿತವಾವಾಗುತ್ತದೆ. ನಂತರ ಆ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.
ಈ ಋತುವಿನಲ್ಲಿ ಆರೋಗ್ಯವಾಗಿರಲು, ನಿಮ್ಮ ಆಹಾರದಲ್ಲಿ ಕೆಲವು ವಿಶೇಷಗಳನ್ನ ಸೇರಿಸಿಕೊಳ್ಳಬಹುದು. ಹೌದು, ಈ ವಿಶೇಷಗಲಲ್ಲಿ ಹರ್ಬಲ್ ಚಹಾ ಕೂಡ ಸೇರಿದೆ. ಮಾನ್ಸೂನ್‌ನಲ್ಲಿ ಈ ವಿಶೇಷ ಹರ್ಬಲ್ ಚಹಾ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್, ಉರಿಯೂತ ನಿವಾರಕ ಮತ್ತು ಆಂಟಿವೈರಲ್ ಗುಣಲಕ್ಷಣಗಳು ದೇಹವನ್ನು ಆರೋಗ್ಯವಾಗಿಡಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಸಂಜೀವ್ ಕಪೂರ್ ಅವರ ಸ್ಪೆಷಲ್ ಮಾನ್ಸೂನ್ ಫೇಮಸ್ ಹರ್ಬಲ್ ಟೀ ರೆಸಿಪಿ ಹೇಗೆ ಮಾಡೋದು ಎಂದು ತಿಳಿದುಕೊಳ್ಳಿ.
ಹರ್ಬಲ್ ಟೀ ತಯಾರಿಸಲು ಬೇಕಾಗುವ ಪದಾರ್ಥಗಳು-
– ನಿಂಬೆ ಹುಲ್ಲು
– ಶುಂಠಿ
– ನಿಂಬೆ
– ತುಳಸಿ
– ಏಲಕ್ಕಿ
– ಜೇನು
– ಲವಂಗ
ಹರ್ಬಲ್ ಟೀ ಮಾಡುವ ಸುಲಭ ವಿಧಾಮ
ಹರ್ಬಲ್ ಟೀ ತಯಾರಿಸಲು, ಮೊದಲು ನೀವು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿಕೊಳ್ಳಿ ನಂತರ ಅದರಲ್ಲಿ ಎಲ್ಲಾ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಮಿಶ್ರಣ ಮಾಡಬೇಕು. ನೀರಿನ ಬಣ್ಣ ಬದಲಾಗುವವರೆಗೆ ನೀರು ಕುದಿಯಲು ಬಿಡಿ. ನೀರು ಕುದಿಯುವ ನಂತರ ತಿಳಿ ಚಿನ್ನದ ಬಣ್ಣಕ್ಕೆ ತಿರುಗಿದಾಗ, ಗ್ಯಾಸ್ ಆಫ್ ಮಾಡಿ. ಈಗ ಒಂದು ಕಪ್‌ನಲ್ಲಿ ಹರ್ಬಲ್ ನೀರನ್ನ ಸೋಸಿ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಿರಿ.
https://www.instagram.com/reel/Cf_UJxLgybZ/?utm_source=ig_embed&ig_rid=4fea629c-a785-48ca-a0d1-cff697173eef








