ಇನ್ನಷ್ಟು ಶಾಸಕ, ಸಚಿವರು ಕೋರ್ಟ್ ಮೊರೆ ಹೋಗಲಿದ್ದಾರೆ : ಬಿ.ಸಿ.ಪಾಟೀಲ್
ಕೊಪ್ಪಳ : ಇನ್ನಷ್ಟು ಶಾಸಕ, ಸಚಿವರೂ ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಂಬೆ ಟೀಂನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ತಮ್ಮ ವಿರುದ್ಧದ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿಬರ್ಂಧ ವಿಧಿಸಬೇಕೆಂದು ಮಿತ್ರಮಂಡಳಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದು, ಇದಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ.
ಈ ಮಧ್ಯೆ ಈ ವಿಚಾರದ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಇನ್ನಷ್ಟು ಸಚಿವರು, ಶಾಸಕರು ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನಾವು ಯಾರನ್ನೂ ಕೇಳಿ, ಕೋರ್ಟ್ ಗೆ ಹೋಗಿಲ್ಲ. ಇದು ನಮ್ಮ ಚಿಂತನೆ. ಇನ್ನಷ್ಟು ಶಾಸಕ, ಸಚಿವರೂ ಕೋರ್ಟ್ ಮೊರೆ ಹೋಗಬಹುದು ಎಂದು ಹೇಳಿದರು.
ಇನ್ನ ಈ ಜಗತ್ತಿನಲ್ಲಿ ಯಾರು ಏನೂ ಬೇಕಾದರೂ ಮಾಡಬಹುದು ಎಂಬ ರೀತಿಯಾಗಿದೆ. ನಾವು ಕಷ್ಟಪಟ್ಟು ಈ ಮಟ್ಟಕ್ಕೆ ಬಂದಿದ್ದೇವೆ.
ಆದ್ರೆ ಕೆಲವರು ನಮ್ಮ ತೇಜೋವಧೆ ಮಾಡಲು ಕಾಯ್ತಿದ್ದಾರೆ. ಇದರಲ್ಲಿ ಸರ್ಕಾರ ಕಳೆದುಕೊಂಡವರೂ ಇದ್ದಾರೆ. ಅದಕ್ಕೆ ಮುಂಜಾಗ್ರತಾ ಕ್ರಮವಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ತಿಳಿಸಿದ್ದಾರೆ.