ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಅಸ್ತಿತ್ವಕ್ಕೆ ಬಂದ ನಂತರ ಅಧಿಕಾರಿಗಳಾಗಿ ಮೊದಲು ಕಾರ್ಯ ನಿರ್ವಹಿಸಿದ್ದ 200ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಲಾಗಿದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ತಿಳಿಸಿದೆ.
ಸೇನೆ, ಪೊಲೀಸ್ ಹಾಗೂ ಗುಪ್ತಚರ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದವರನ್ನು ಹತ್ಯೆ ಮಾಡಲಾಗಿದೆ ಎಂದು ಅಪ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ನೆರವು ಯೋಜನೆಯ ಅಂಗ ಸಂಸ್ಥೆ ತಿಳಿಸಿದೆ.
2021ರ ಆಗಸ್ಟ್ 15ರಿಂದ 2023ರ ಜೂನ್ ನಡುವೆ ಮಾನವ ಹಕ್ಕುಗಳ ಉಲ್ಲಂಘನೆಯ 800 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ. ಅಮೆರಿಕ ಹಾಗೂ ನ್ಯಾಟೊ ಪಡೆಗಳು ಅಪ್ಘಾನಿಸ್ತಾನ ತೊರೆದಾಗ ದೇಶದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಕೂಡ ಬೇರೆ ದೇಶಕ್ಕೆ ಪಲಾಯನ ಮಾಡಿದ್ದರು. ಆದರೆ, ಅಮೆರಿಕ ಪಡೆಗಳಇಂದ ತರಬೇತಿ ಪಡೆದಿದ್ದ ಅಪ್ಘಾನಿಸ್ತಾನದ ಪಡೆಗಳು ಅಲ್ಲಿಯೇ ಉಳಿದಿದ್ದವು ಕೂಡ. ಹಿಂದಿನ ಸರ್ಕಾರದ ಭದ್ರತಾ ಪಡೆಯಲ್ಲಿದ್ದ ಅಧಿಕಾರಿಗಳನ್ನು ತಾಲಿಬಾನ್ ಪಡೆಗಳು ವಶಕ್ಕೆ ಪಡೆದು ಬಳಿಕ ಹತ್ಯೆ ಮಾಡಿವೆ ಎನ್ನಲಾಗಿದೆ. ಕೆಲವನ್ನು ವಶಕ್ಕೆ ಪಡೆದಾಗ ಹತ್ಯೆ ಮಾಡಲಾಗಿದ್ದು, ಇನ್ನೂ ಕೆಲವನ್ನು ಅಜ್ಞಾತ ಸ್ಥಳಗಳಿಗೆ ಕೊಂಡೊಯ್ದು ಕೊಲೆ ಮಾಡಿ ಅವರ ಮೃತ ದೇಹಗಳನ್ನು ಬೀಸಾಡಲಾಗಿದೆ. ಕೆಲವರ ಮೃತದೇಹಗಳನ್ನಷ್ಟೇ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.