ಆಂಧ್ರದಲ್ಲೊoದು ಅಮಾನವೀಯ ಘಟನೆ 300 ನಾಯಿಗಳಿಗೆ ವಿಷಪ್ರಾಶನ ಮಾಡಿ ಹತ್ಯೆ..!
ಆಂಧ್ರಪ್ರದೇಶ : ಆಂಧ್ರಪ್ರದೇಶದಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ.. ಸುಮಾರು 300 ನಾಯಿಗಳಿಗೆ ವಿಷ ಹಾಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಮದಿದೆ.. ವಿಷ ಹಾಕಿ 300 ಶ್ವಾನಗಳನ್ನು ಹತ್ಯೆ ಮಾಡಲಾಗಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ.
ಲಿಂಗಪಾಲೆಂ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿತ್ತು. ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಪಂಚಾಯಿತಿಯವರು ವಿಷವುಣಿಸಿ 300 ಬೀದಿನಾಯಿಗಳನ್ನು ಕೊಂದು ಹೊಂಡದಲ್ಲಿ ಹೂತು ಹಾಕಿದ್ದಾರೆ. ಪ್ರಾಣಿದಯಾ ಸಂಘದ ಲಲಿತ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ನಾಯಿಗಳನ್ನು ಕೊಂದ ಪಂಚಾಯಿತಿ ವಿರುದ್ಧ ರ್ಮಾಜಿಗೊಡೆಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಾಣಿ ದಯಾ ಸಂಘಟನೆಯ ಲಲಿತಾ ಎಂಬುವವರು ಲಿಂಗಾಪಾಲೇಮ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ವಿಷ ಹಾಕಿ ಹತ್ಯೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಅವರನ್ನು ಬಂಧಿಸುವ ಬದಲು ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ನಾನು ಗ್ರಾಮಕ್ಕೆ ಭೇಟಿ ನೀಡಿದಾಗ 300ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸುಟ್ಟು ಹಾಕಿರುವುದು ತಿಳಿದು ಬಂದಿತು. ನಾನು ಇದರ ಹಿಂದೆ ಬಿದ್ದು ತನಿಖೆ ಮಾಡಿದಾಗ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಕೆಲವು ವ್ಯಕ್ತಿಗಳ ಜೊತೆ ಕೈ ಜೋಡಿಸಿ ನಾಯಿಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.