ಮಾರ್ನಿಂಗ್ ನ್ಯೂಸ್ ಅಪ್ಡೇಟ್…

ಕೊರೊನಾವೈರಸ್ ಅನ್ಲಾಕ್ -2:

ಗೃಹ ಸಚಿವಾಲಯವು ಅನ್ಲಾಕ್ -2 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಇದು ಜುಲೈ 31 ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಕಂಟೈನ್‌ಮೆಂಟ್ ವಲಯಗಳಲ್ಲಿ ಜುಲೈ 31 ರವರೆಗೆ ಲಾಕ್‌ಡೌನ್ ಮುಂದುವರಿಸಲಾಗಿದೆ. ಸದ್ಯ ಯಾವುದೇ ಲಾಕ್ ಡೌನ್ ಜಾರಿ ಮಾಡುವ ಉದ್ದೇಶವಿಲ್ಲ. ಶಾಲಾ ಕಾಲೇಜು , ಅಂತಾರಾಷ್ಟ್ರೀಯ ವಿಮಾನಯಾನ , ಮೆಟ್ರೋ , ಜಿಮ್ ಮೇಲಿನ ನಿರ್ಬಂಧ ಮುಂದುವರಿಸಲಾಗಿದೆ.

 

ಪ್ರಧಾನಿ ಮೋದಿ :

ಪ್ರಧಾನಿ ಮೋದಿ ಇಂದು ಸಂಜೆ 4 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ಲಾಕ್ 2 ರ ಮಾರ್ಗ ಸೂಚಿ ಪ್ರಕಟವಾಗಿದ್ದು ಹೊಸ ನೀತಿಯ ನಿರೀಕ್ಷೆಯಲ್ಲಿ ದೇಶದ ಜನ.

ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಅನ್ನು ಜುಲೈ 31 ರವರೆಗೆ ವಿಸ್ತರಿಸಿಡಾ ಮಹಾ ಸರಕಾರ

ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಆದೇಶ ಬಂದಿದೆ. ಭಾನುವಾರ, ಮಹಾರಾಷ್ಟ್ರವು ತನ್ನ ಅತಿದೊಡ್ಡ ಏಕದಿನ ಸ್ಪೈಕ್ 5,493 ಪ್ರಕರಣಗಳನ್ನು ವರದಿ ಮಾಡಿದೆ, ಒಟ್ಟು ರೋಗಿಗಳ ಸಂಖ್ಯೆ 1,64,626 ಕ್ಕೆ ತಲುಪಿದೆ. ಸಾವಿನ ಸಂಖ್ಯೆ 7,429 ತಲುಪಿದೆ.

ಅನಿವಾರ್ಯವಲ್ಲದ ಚಟುವಟಿಕೆಗಳು ಮತ್ತು ಜನರ ಚಲನೆಗೆ ನಿರ್ಬಂಧಗಳನ್ನು ಕೋವಿಡ್ -19 ಹಾಟ್‌ಸ್ಪಾಟ್‌ಗಳಲ್ಲಿ ಮತ್ತೆ ಹೇರಲಾಗುವುದು ಎಂದು ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This