ಮನೆಯ ಸೊಳ್ಳೆ ನಿವಾರಕ ಯಂತ್ರದಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ವೃದ್ದೆ ಹಾಗೂ ಅವರ ಮೂವರು ಮೊಮ್ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮನಾಲಿ ಸಮೀಪದ ಮಾಥುರ್ನಲ್ಲಿ ನಡೆದಿದೆ.
ಸಂತಾನಲಕ್ಷ್ಮೀ (65) ಹಾಗೂ ಮೂವರು ಮೊಮ್ಮಕ್ಕಳಾದ ಸಂಧ್ಯಾ, ಪ್ರಿಯಾ ರಕ್ಷಿತ ಹಾಗೂ ಪವಿತ್ರ ಎಂಬುವವರೇ ಉಸಿರುಗಟ್ಟಿ ಸಾವನ್ನಪ್ಪಿದ ದುರ್ದೈವಿಗಳು.
ಸೊಳ್ಳೆ ಹೆಚ್ಚಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಸೊಳ್ಳೆ ನಿವಾರಕವನ್ನು ಹಚ್ಚಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿದೆ. ಈ ವೇಳೆ ನಾಲ್ವರು ಕೂಡ ಗಾಢ ನಿದ್ರೆಯಲ್ಲಿದ್ದರು. ಹೀಗಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮನೆಯಿಂದ ಹೊಗೆ ಬರುತ್ತಿರುವುದನ್ನು ನೆರೆ ಮನೆಯವರು ಬೆಳಗ್ಗೆ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಜ್ಞೆ ತಪ್ಪಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಸಾವನ್ನಪ್ಪಿದ್ದನ್ನು ಖಚಿತಪಡಿಸಿದ್ದಾರೆ.