ADVERTISEMENT
Tuesday, June 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

IMDBಯ ಪ್ರಕಾರ 2022 ರ 10 ಅತ್ಯಂತ ನಿರೀಕ್ಷಿತ ಸಿನಿಮಾಗಳಿವು…! KGF ಗೆ ಎಷ್ಟನೇ ಸ್ಥಾನ..!

Namratha Rao by Namratha Rao
December 19, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

IMDBಯ ಪ್ರಕಾರ 2022 ರ 10 ಅತ್ಯಂತ ನಿರೀಕ್ಷಿತ ಸಿನಿಮಾಗಳಿವು…! KGF ಗೆ ಎಷ್ಟನೇ ಸ್ಥಾನ..!

ಇನ್ನೇನು 2021 ಕ್ಕೆ ಗುಡ್ ಬೈ ಹೇಳೋ  ಸಮಯ ಹತ್ರ ಬಂದೇ ಬಿಡ್ತು.. ನಾವೆಲ್ರೂ 2021ರ ಕೊನೆಯ ತಿಂಗಳಿನಲ್ಲಿದ್ದು 2022 ಅನ್ನ ಹೊಸ ಉತ್ಸಾಹದಿಂದ , ಹೊ ಆಸೆ , ಕನಸುಗಳ ಜೊತೆ ಬರಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ.. ಆದ್ರೆ ಸಿನಿಮಾರಂಗದ ಪಾಲಿಗೆ ಈ ವರ್ಷ ಪರವಾಗಿಲ್ಲ ಅನ್ನೋ ರೀತಿ ಇತ್ತು ಹೊರತು.. ಸೂಪರ್ ಅನ್ನೋ ಅಷ್ಟು ಅಮೇಜಿಂಗ್ ಆಗಿ ಇರಲಿಲ್ಲ.. ಕಾರಣ ಕೊರೋನಾ.. 2 ವರ್ಷಗಳಿಂದ ಸಿನಿಮಾರಂಗ ಚೈತನ್ಯ ಕಳೆದುಕೊಂಡಿತ್ತು..

Related posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

June 15, 2026
ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

June 15, 2026

2 ಅಲೆಗಳ ನಡುವೆ ಸಿನಿಮಾರಂಗಕ್ಕೆ ದೊಡ್ಡ ಪೆಟ್ಟೇ ಬಿದ್ದಿತ್ತು.. ಆದ್ರೂ ಕೆಲ ತಿಂಗಳಿಂದ ಮತ್ತೆ ಕೊಂಚ ಮಟ್ಟಿಗೆ ಚೇತರಿಸಿಕೊಂಡು ಸ್ಟಾರ್ ಗಳ ಸಿನಿಮಾಗಳು ಭಾರತದಲ್ಲಿ ರಿಲೀಸ್ ಆಗಿ ಅಬ್ಬರಿವೆ.. ಮದಗಜ ಇರಬಹುದು ,ಅಖಂಡ ಇರಬಹುದು , ಕೋಟಿಗೊಬ್ಬ 3 , ಸಲಗ,  ಹಿಂದಿಯ ಸೂರ್ಯವಂಶಿ ಇರಬಹುದು.. ಅಣ್ಣಾತೆ ಇರಬಹುದು..  ಪ್ರಸ್ತುತ ಆಲ್ ಓವರ್ ಇಂಡಿಯಾದಲ್ಲಿ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣ್ತಿರುವ ಅಲ್ಲು ನಟನೆಯ ಪುಷ್ಪ ಇರಬಹುದು..  ಸದ್ಯ 2022ನೇ ವರ್ಷದಲ್ಲಿ ಹಲವು ಸ್ಟಾರ್ ಸಿನಿಮಾಗಳು ರಿಲೀಸ್ ರೆಡಿಯಾಗಿ ನಿಂತಿವೆ.. ಸಿನಿಮಾ ಪ್ರೇಕ್ಷಕರು ಅತ್ಯಂತ ಕಾತರತೆಯಿಂದ ಕಾಯ್ತಿದ್ದಾರೆ..

IMDb ಯು 2022 ರ 10 ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ KGF ಚಾಪ್ಟರ್ 2, RRR, ವಿಕ್ರಾಂತ್ ರೋಣ ಸಿನಿಮಾಗಳು ಕೂಡ ಸೇರಿವೆ.. 200 ಮಿಲಿಯನ್‌ ಗಿಂತಲೂ ಹೆಚ್ಚು ಮಾಸಿಕ ಬಳಕೆದಾರರೊಂದಿಗೆ , ನೆಟ್ಟಿಗರಿಂದ ಸ್ವೀಕರಿಸಿದ ಪುಟವೀಕ್ಷಣೆಗಳ ಆಧಾರದ ಮೇಲೆ ಈ ಪಟ್ಟಿಯನ್ನು IMDB ವೆಬ್‌ಸೈಟ್ ನಿರ್ಧರಿಸಿದೆ. ಈ ಪಟ್ಟಿಯಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಚಲನಚಿತ್ರಗಳು ಸೇರಿವೆ..

IMDB ಯ ಅನ್ವಯ 2022 ರಲ್ಲಿ ಬಹುನಿರೀಕ್ಷಿತ ಟಾಪ್ ಸಿನಿಮಾಗಳ ಲಿಸ್ಟ್ ಇಲ್ಲಿದೆ..

1. KGF CHAPTER 2 : ಮೊದಲೇ ಸ್ಥಾನದಲ್ಲಿ ನಮ್ಮ ಕನ್ನಡದ ಸಿನಿಮಾ , ರಾಕಿಂಗ್ ಸ್ಟಾರ್ ಯಶ್ ನಟನೆ , ಪ್ರಶಾಂತ್ ನೀಲ್ ನಿರ್ದೇಶನ , ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ KGF ಚಾಪ್ಟರ್ 2 ಸಿನಿಮಾವಿದೆ.. ಇಡೀ ದೇಶವೇ ಕಾಯುತ್ತಿರುವ ಬಹುನಿರೀಕ್ಷೆಯ ಸಿನಿಮಾ ಇದಾಗಿದೆ.. 2018 ರಲ್ಲಿ ಬಿಡುಗಡೆಯಾದ ಮೊದಲ ಭಾಗದ ನಂತರ, ಇದು ರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇ ಅಲ್ಲದೇ ಅಂತರಾಷ್ಟ್ರಿಯ ಮಟ್ಟದಲ್ಲಿ ಜೋರಾಗಿಯೇ ಸೌಂಡ್ ಮಾಡಿದೆ.. ಈ ಸಿನಿಮಾ 2022 ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ..

2. RRR : ಎರಡನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನ , ರಾಮ್ ಚರಣ್ , ಜ್ಯೂನಿಯರ್ NTR ಅಭಿನಯದ ಬಹುನಿರೀಕ್ಷೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ RRR ಇದೆ.. KGF ನಂತರ ಇಡೀ ದೇಶದ ಜನರು ಬಹಳ ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಇದಾಗಿದೆ.. ಜನವರಿ 7 ಕ್ಕೆ ಸಿನಿಮಾ ಭಾರತದಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ..

3. ಲಾಲ್ ಸಿಂಗ್ ಚಡ್ಡಾ : 3 ನೇ ಸ್ಥಾನದಲ್ಲಿ ನಮ್ಮ ರಾಕಿ ಬಾಯ್ ಮುಂದೆ ಹೋರಾಡಾಕೆ ನಿಂತಿರುವ ಬಾಲಿವುಡ್ ನ ಬಹುನಿರಿಕ್ಷೆಯ ಅಮೀರ್ ಖಾನ್, ಕರೀನಾ ಕಪೂರ್ ಖಾನ್  ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾವಿದೆ.. ಅಂದ್ಹಾಗೆ ಈ ಸಿನಿಮಾ ಕೆಜಿಎಫ್ ರಿಲೀಸ್ ಆಗುತ್ತಿರುವ ದಿನವೇ ರಿಲೀಸ್ ಆಗ್ತಿದೆ.. ಆದ್ರೆ ಈ ಸಿನಿಮಾ ನಮ್ಮ ರಾಕಿ ಭಾಯ್ ಮುಂದೆ ಮಂಡಿಯೂರುತ್ತಾ ಅಥವ ಸಮಬಲದಲ್ಲಿ ಹೋರಾಟ ಮಾಡುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ..

4. ಗಂಗೂಭಾಯಿ ಕಾಥೇಯವಾಡಿ : 4ನೇ ಸ್ತಾನದಲ್ಲಿ ಮತ್ತೊಬ್ಬ ಸ್ಟಾರ್ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿಯಾವಾಡಿ ಸಿನಿಮಾವಿದೆ.. ಈ ಸಿನಿಮಾದಲ್ಲಿ  ಆಲಿಯಾ ಭಟ್ ನಟಿಸಿದ್ದು  ಮುಂದಿನ ವರ್ಷವೇ ರಿಲೀಸ್ ಆಗಲಿದೆ..

5. ಬೀಸ್ಟ್ : 5ನೇ ಶ್ತಾನದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ  ಬೀಸ್ಟ್ ಸಿನಿಮಾವಿದೆ.. ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ.

6. ವಿಕ್ರಾಂತ್ ರೋಣ : ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕೂಡ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿರುವ ನಮ್ಮ ಕನ್ನಡ ಸಿನಿಮಾವಾಗಿದೆ.. ಈ ಸಿನಿಮಾವನ್ನ ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ..

7. ರಾಧೆ ಶ್ಯಾಮ್ :  7ನೇ ಸ್ಥಾನದಲ್ಲಿ ರಾಧೆ ಶ್ಯಾಮ್ ಸಿನಿಮಾವಿದೆ.. ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಪಕ್ಕಾ ಲವರ್ ಬಾಯ್ ಆಗಿ  ಕಾಣಿಸಿಕೊಳ್ತಿದ್ದು , ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ..

8. ಬ್ರಹ್ಮಾಸ್ತ್ರ : ಇನ್ನೂ 8ನೇ ಸ್ಥಾನದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾವಿದೆ..ಅಯನ್ ಮುಖರ್ಜಿ ನಿರ್ದೇಶಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಹಿಂದಿ , ಕನ್ನಡ , ತಮಿಳು ,  ತೆಲುಗು , ಮಲಯಾಳಂನಲ್ಲಿ ಬರಲಿದೆ..

ಚಿತ್ರದಲ್ಲಿ ನಾಗಾರ್ಜುನ್ ಅಕ್ಕಿನೇನಿ , ಅಮಿತಾಬ್ ಬಚ್ಚನ್ ಮೌನಿ ರಾಯ್ ಸೇರಿದಂತೆ ಇನ್ನೂ ದೊಡ್ಡ ದೊಡ್ಡ ನಟರು ಬಣ್ಣ ಹಚ್ಚಿದ್ದಾರೆ..

9. ಧಾಕಡ್ :  ಕಂಗನಾ ರಣಾವತ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಧಾಕಡ್  ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.. ರಜನೀಶ್ ರಾಜಿ ಘಾಯ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಅರ್ಜುನ್ ರಾಂಪಾಲ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಸಿನಿಮಾದಲ್ಲಿ ಕಂಗನಾ ಮಸ್ತ್ ಆಕ್ಷನ್ ಸೀನ್ಸ್ ಗಳ ಮೂಲಕ ಸಖತ್ ಸ್ಟ್ರಾಂಗ್ ವುಮೆನ್ ಆಗಿ ಕಾಣಿಸಿಕೊಳ್ಳಲಿದ್ದಾರೆ..

10. ಆದಿಪುರುಷ್ :  ಆದಿಪುರುಷ್ ಸಿನಿಮಾವು ಈ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.. ಈ ಸಿನಿಮಾದಲ್ಲಿ ಪ್ರಭಾಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ..

Tags: #saakshatvkgf2most anticipated indian films 2022RRR
ShareTweetSendShare
Join us on:

Related Posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

by Shwetha
June 15, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಲ್ಲಿ ನೂರಾರು ಕೋಟಿ ರೂಪಾಯಿ ಸೋರಿಕೆ ಮತ್ತು ದುರ್ಬಳಕೆಯಾಗಿರುವುದು ಪತ್ತೆಯಾಗಿದ್ದು, ಇದನ್ನು ತಡೆಯಲು ಸರ್ಕಾರ ಈಗ...

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

by Shwetha
June 15, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದು, ಗೃಹಲಕ್ಷ್ಮಿ ಯೋಜನೆಯನ್ನು ಚುನಾವಣಾ ಲಕ್ಷ್ಮಿ...

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತ: ಭೂ ಪರಿಹಾರಕ್ಕಾಗಿ ಸತಾಯಿಸಿದ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತ: ಭೂ ಪರಿಹಾರಕ್ಕಾಗಿ ಸತಾಯಿಸಿದ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು

by Shwetha
June 15, 2026
0

ಬಾಗಲಕೋಟೆ: ಅನ್ನದಾತನ ತಾಳ್ಮೆಯ ಕಟ್ಟೆ ಒಡೆದರೆ ಏನಾಗುತ್ತದೆ ಎಂಬುದಕ್ಕೆ ಬಾಗಲಕೋಟೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿ ಪಡೆದು, ದಶಕಗಳ ಕಾಲ ಪರಿಹಾರ ನೀಡದೆ...

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

by Shwetha
June 15, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಪಾರದರ್ಶಕ ಆಡಳಿತ ನೀಡಲು ಮುಖ್ಯಮಂತ್ರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ಕಿರುಕುಳ ನೀಡುವ ಮತ್ತು ಲಂಚ ಕೇಳುವ...

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

by Shwetha
June 15, 2026
0

ಬೆಂಗಳೂರು: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಸರ್ಕಾರದ ನಡೆಗಳ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram