ಪ್ರಪಂಚದ ಅತ್ಯಂತ ಡೆಡ್ಲಿ ಪ್ರಾಣಿಗಳ ಬಗ್ಗೆ ಗೊತ್ತಾ..?
ಸಾಮಾನ್ಯವಾಗಿ ವನ್ಯಜೀವಿಗಳಂದರೇನೆ ಜನಕ್ಕೆ ಹೆದರಿಕೆಯಾಗೋದು ಸಹಜ. ಹುಲಿ, ಸಿಂಹ ಮೊಸಳೆಯಂತಹ ಕಾಡು ಪ್ರಾಣಿಗಳ ಬಗ್ಗೆ ಕೇಳಿದರೆ, ಟಿವಿಯಲ್ಲಿ ಆ ಬಗ್ಗೆ ನೋಡುದ್ರೇನೆ ಅಬ್ಬಾ.. ಎನ್ನಿಸುತ್ತೆ.. ಆದರೆ ಇವುಗಳಿಗಿಂತ ಭಯಾನಕ ಪ್ರಾಣಿಗಳು ಪ್ರಪಂಚದಲ್ಲಿವೆ.
ಭೂಮಿ ಮೇಲೆ ಕೋಟ್ಯಾಂತರ ಜೀವಿಗಳು ಇವೆ.. ಸಾವಿರಾರು ಡೆಡ್ಲಿಯೆಸ್ಟ್ ಅಲ್ಲೇ ಡೆಡ್ಲಿ ಪ್ರಾಣಿಗಳು ಇವೆ. ಈ ಪ್ರಾಣಿಗಳು ನೋಡೋದಕ್ಕೂ ಅಷ್ಟೇ ಭಯಾನಕವಾಗಿರುತ್ವೆ.. ಆದರೆ ಪ್ರಪಂಚದ ಅತ್ಯಂತ ಡೇಂಜರಸ್ ಜೀವಿಗಳಲ್ಲಿ ವಿಶ್ಲೇಷಿಸಬಹುದಾದ ಕೆಲವು ಪ್ರಾಣಿಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡ್ತೇವೆ ನೋಡಿ..
ಹಾವುಗಳು
ಹಾವುಗಳು… ವಿಷಕಾರಿ ಹಾವುಗಳನ್ನ ವಿಶ್ವದಲ್ಲೇ ಅತ್ಯಂತ ಡೇಂಜರಸ್ ಡೆಡ್ಲಿಯೆಸ್ಟ್ ಕ್ರಿಯೇಚರ್ ಎಂದು ವರ್ಣಿಸಲಾಗುತ್ತೆ. ಸಾವಿರಾರು ಪ್ರಜಾತಿಯ ಹಾವುಗಳು ಭೂಮಿ ಮೇಲಿದೆ. ಮೂಲಗಳ ಪ್ರಕಾರ ಪ್ರತಿ ವರ್ಷ ಸುಮಾರು 50 ಸಾವಿರಕ್ಕೂ ಅಧಿಕ ಜನರು ಹಾವುಗಳು ಕಚ್ಚಿ ಸಾವನಪ್ಪಿದ್ದಾರೆ. ಸಾವಿರಾರು ಪ್ರಜಾತಿಗಳ ಹಾವುಗಳಲ್ಲಿ ಇನ್ನೂ ಅದೆಷ್ಟೋ ಹಾವುಗಳ ಬಗ್ಗೆ ಜನರೆಗೇ ಗೊತ್ತೇ ಇಲ್ಲ. ಅಷ್ಟು ರೀತಿಯ ವಿಷಕಾರಿ ಸರ್ಪಗಳು ಭೂಮಿಮೇಲೆ ನೆಲೆಸಿವೆ. ಎಣಿಸಲಾಗದಷ್ಟು ವಿವಿಧ ಪ್ರಜಾತಿ ಡೆಡ್ಲಿ ಹಾವುಗಳಿವೆ.
ಹಿಪಪಾಟಮಸ್ ( ನೀರಾನೆ)
ಅರೆ ಜಲವಾಸಿ ಹಿಪಪಾಟಮಸ್ ಒನ್ ಆಫ್ ದ ಮೋಸ್ಟ್ ಡೇಂಜರಸ್ ಪ್ರಾಣಿ ಎಂದೇ ವರ್ಣಿಸಲಾಗಿರುವ ಜೀವಿ. ಹೌದು ನೀರಾನೆ ( ಹಿಪ್ಪೊ) ಅತ್ಯಂತ ಡೇಂಜರಸ್ ಪ್ರಾಣಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಬೆಚ್ಚಿ ಬೀಳಿಸುವ ವಿಚಾರವೆಂದ್ರೆ. ಆಫ್ರಿಕಾದ ಸ್ಥಳೀಯರ ಪ್ರಕಾರ ಹುಲಿ, ಸಿಂಹ, ಆನೆ, ಮೊಸಳೆಗಳಿಗಿಂತಲೂ ಹಿಪ್ಪೋ ಹೆಚ್ಚಿನ ಜನರನ್ನು ಬಲಿಪಡೆಕೊಂಡಿದೆಯಂತೆ. ಅಷ್ಟೇ ಯಾಕೆ ಹಿಪ್ಪೋ ಸುಲಭವಾಗಿ ಮೊಸಳೆಯನ್ನು ಕೊಲ್ಲಬಹುದು. ವಿಶ್ವದಲ್ಲಿ ವೇಲ್ಸ್ ಮತ್ತು ಆನೆಗಳ ನಂತರ ಮೂರನೆಯ ಅತೀ ದೊಡ್ದ ಸಸ್ತನಿ ಹಿಪಾಪೊಟಮಸ್..
ಮೊಸಳೆ
ನಂತರದಲ್ಲಿ ಬರೋದು ಮೊಸಳೆ.. ಮೊಸಳೆಗಳು ಸಹ ಅರೆಜಲವಾಸಿ ಪ್ರಾಣಿ.. ಮೊಸಳೆಗಳಲ್ಲಿ ಇತರ ಎಲ್ಲಾ ಪ್ರಾಣಿಗಳಿಗಿಂತಲೂ ಆಕ್ರಮಣಶೀಲತೆ ಹೆಚ್ಚಾಗಿರುತ್ತದೆ. ಮೊಸಳೆಗಳು ಹೆಚ್ಚಾಗಿ ಆಫ್ರಿಕಾ, ಏಷ್ಯಾ, ಅಮೆರಿಕಾ ಭಾಗಗಳಲ್ಲಿ ಕಾಣಸಿಗುತ್ತವೆ. ಮೊಸಳೆಗಳ ಹಲ್ಲುಗಳು ಅತ್ಯಂತ ಚೂಪಾಗಿರುತ್ತವೆ. ಹೀಗಾಗಿ ಮೊಸಳೆಗಳ ಬಾಯಿಗೆ ಒಮ್ಮೆ ಏನಾದ್ರು ಸಿಕ್ಕಿಬಿಟ್ರೆ ಕಥೆ ಮುಗಿತೂ ಅಂಥನೇ ಅರ್ಥ.. ತಪ್ಪಿಸಿಕೊಮಡು ಬದುಕುಳಿಯುವ ಛಾನ್ಸೇ ಇಲ್ಲ..
ನಾಯಿಗಳು
ಎಸ್ ನಾಯಿಗಳು ಅಂದ ತಕ್ಷಣ ನಿಮ್ಗೆ ಆಶ್ಚರ್ಯ ಆಗೋದು ಸಹಜ.. ಯಾಕಂದ್ರೆ ಇವು ಕಾಡುಪ್ರಾಣಿಗಳಾಗಲಿ ಅಥವಾ ಡೆಡ್ಲಿ ಲಿಸ್ಟ್ ಗೆ ಸಹಜವಾಗಿ ಸೇರಿಕೊಳ್ಳುವುದಿಲ್ಲ. ಸಾಕು ಪ್ರಾಣಿಗಲಲ್ಲೇ ಹೆಚ್ಚು ಪ್ರೀತಿ ಪಡೆದುಕೊಳ್ಳುವ ಪ್ರಾಣಿಗಳಂದರೇ ಅವು ನಾಯಿಗಳೇ.. ಆದರೆ ನಾಯಿಗಳನ್ನೂ ಸಹ ಡೇಂಜರಸ್ ಪ್ರಾಣಿಗಳ ಪಟ್ಟಿಗೆ ಸೇರಿಸೋದರೆ ತಪ್ಪಾಗಲಾರದು. ಇದಕ್ಕೆ ಕಾರಣವೂ ಇದೆ. ನೀವು ನಾಯಿಗಳು ಮನುಷ್ಯರ ಮೇಲೆಯೇ ದಾಳಿ ಮಾಡಿರುವ ಅನೇಕ ಪ್ರಕರಣಗಳನ್ನ ನೋಡಿದ್ದೀರ. ಹಲವರು ದಾಳಿಯಿಂದ ಪ್ರಾಣ ಕಳೆದುಕೊಂಡಿರುವುದೂ ಉಂಟು. ಹೌದು ಕೆಲವೊಮ್ಮೆ ಕೆಲ ನಾಯಿಗಳು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಓಡಾಡುವವರ ಮೇಲೆ ಹಲ್ಲೆ ನಡೆಸುತ್ತವೆ. ಭಯಾನಕ ವಿಚಾರವೆಂದರೆ.. ಇಡೀ ವಿಶ್ವದಲ್ಲೇ ಪ್ರತಿ ವರ್ಷ 24 ಸಾವಿರಕ್ಕೂ ಹೆಚ್ಚು ಜನರ ಮೇಲೆ ನಾಯಿಗಳು ಅಟ್ಯಾಕ್ ಮಾಡುತ್ತವೆ ಎಂಬುದು ಮೂಲಗಳಿಂದ ತಿಳಿದು ಬಂದಿರುವ ಕಠೋರ ಸತ್ಯ.
ವಿಶ್ವದಲ್ಲೇ ಅತ್ಯಂತ ಭಯಾನಕ ಪ್ರಾಣಿಗಳು ನಮ್ಮ ಭೂಮಿಮೇಲಿವೆ. ಡೇಂಜರಸ್ ಗಿಂತಲೂ ಡೆಡ್ಲಿ ಪ್ರಾಣಿಗಳ ಲಿಸ್ಟ್ ಮಾಡೋದಕ್ಕೂ ಆಗಲ್ಲ. ಅಷ್ಟು ವಿಷಪೂರಿತ ಜೀವಿಗಳಿವೆ. ಇನ್ನೂ ಅದೆಷ್ಟೋ ಪ್ರಾಣಿಗಳನ್ನ ನೋಡಿರೋದಿರಲಿ ನಾವೂ ಕೇಳಿಯೂ ಇರುವುದಿಲ್ಲ. ಟಿವಿಯಲ್ಲಿ ನೋಡುವುದಕ್ಕೆ ಭಯಾನಕವಾಗಿರುತ್ತವೆ. ಇನ್ನೂ ನಮ್ಮ ಮುಂದೆ ನಿಜಕ್ಕೂ ಕಾಣಿಸಿಕೊಂಡರೆ ಹೇಗಿರಬಹುದು.. ಅದನ್ನ ಊಹೆ ಮಾಡಿಕೊಂಡರೂ ಮೈ ನಡುಗುತ್ತೆ..