ಪ್ರಪಂಚದ ಅಸಹ್ಯ, ಕೆಟ್ಟ ಆಹಾರ ಪದಾರ್ಥಗಳು..! ಭಾಗ -3
ಈ ಹಿಂದೆ 2 ಭಾಗಗಳಲ್ಲಿ ಪ್ರಪಂಚದ ಕೆಟ್ಟ, ಅಸಹ್ಯ ಹಾಗೂ ವಿಚಿತ್ರ ಆಹಾರಗಳ ಪೈಕಿ 15 ಆಹಾರ ಬಗ್ಗೆ ತಿಳಿದಿದ್ದೆವು. ಇದೀಗ ಈ ಭಾಗದಲ್ಲಿ ಮತ್ತೆ 7 ಅಸಹ್ಯ ಆಹಾರಗಳ ಬಗ್ಗೆ ತಿಳಿಯೋಣ…
ಚೆರ್ರಿ ಬ್ಲಾಸಮ್ ಮೀಟ್ – ಜಪಾನ್
ಚೆರ್ರಿ ಬ್ಲಾಸಮ್ ಮೀಟ್.. ಅಂದ್ರೆ ಕುದುರೆಯ ಮಾಂಸದಿಂದ ಮಾಡಲಾಗುವ ಒಂದು ಖಾದ್ಯ. ಜಪಾನ್ ನಲ್ಲಿ ಈ ಖಾದ್ಯ ತುಂಬಾನೆ ಫೇಮಸ್. ನಿಜ ಬಹುತೇಕ ಕಡೆಗಳಲ್ಲಿ ಕುದುರೆ ಮಾಂಸವನ್ನ ತಿನ್ನಲ್ಲ. ಆದ್ರೆ ಇಲ್ಲಿ ಇದನ್ನ ಕೇವಲ ತಿನ್ನುವುದಷ್ಟೇ ಅಲ್ಲ ಹಸಿಯಾಗಿಯೇ ತಿನ್ನಲಾಗುತ್ತೆಯಂತೆ. ಹೌದು. ಸೂಶಿ ಜೊತೆಗೆ ಇಲ್ಲ ಹಾಗೆಯೇ ಇದನ್ನ ಸರ್ವ್ ಮಾಡಲಾಗುತ್ತಂತೆ. ಕೇಳೋದಕ್ಕೆ ಅಸಹ್ಯ ಹುಟ್ಟುತ್ತೆ.
ಫ್ರಾಗ್ ಲೆಗ್ ( ಕಪ್ಪೆಗಳ ಕಾಲುಗಳು) ಫ್ರಾನ್ಸ್, ಆಗ್ನೇಯ ಏಷ್ಯಾ
ಕಪ್ಪೆಗಳು… ಇವುಗಳನ್ನ ಕಂಡರೇನು ಏನೋ ಒಂಥರ ಅಸಹ್ಯ ಅನ್ನಿಸುತ್ತೆ ಮುಟ್ಟುವುದಕ್ಕೂ ಅಸಹ್ಯ ಪಡೋರಿದ್ದಾರೆ. ಆದ್ರೆ ಇದನ್ನ ಹಲವೆಡೆ ತಿನ್ನುತ್ತಾರೆ. ಫ್ರಾನ್ಸ್ ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಇದನ್ನ ಸೇವನೆ ಮಾಡಲಾಗುತ್ತೆ. ಅದ್ರಲ್ಲೂ ಫ್ರಾಗ್ ಲೆಗ್ ಖಾದ್ಯವನ್ನ ವಿಶ್ವದ ವಿಚಿತ್ರ ಖಾದ್ಯಗಳ ಪಟ್ಟಿಯಲ್ಲಿ ಪಟ್ಟಿ ಮಾಡಲಾಗಿದೆ.
ಗ್ಯುನಿಯಾ ಪಿಗ್ ( ಪೋರ್ಕ್) – ಸೌತ್ ಅಮೆರಿಕಾ
ಗ್ಯುನಿಯಾ ಪಿಗ್… ಈ ಖಾದ್ಯ ಯಾಕೆ ಅಸಹ್ಯ ಎನ್ನಿಸುತ್ತೆ ಅಂದ್ರೆ ಪೋರ್ಕ್ ಅಥವ ಹಂದಿಯನ್ನ ಕಟ್ ಮಾಡದೇ ಹಿಡಿಯಾಗಿಯೇ ಬೇಯಿಸಿ ಸರ್ವ್ ಮಾಡಲಾಗುತ್ತೆ.
ಬಾಲಟ್ – ಫಿಲಿಫೈನ್ಸ್
ಬಾಲಟ್ ಮೊಟ್ಟೆಯೊಳಗೆ ಬೆಳವಣಿಗೆಯಾಗುತ್ತಿರುವ ಬಾತುಕೋಳಿಯನ್ನ ಜೀವಂತವಾಗಿಯೇ ಮೊಟ್ಟೆಯ ಚಿಪ್ಪಲ್ಲೇ ಬೇಯಿಸಿ ಸರ್ವ್ ಮಾಡುವುದು. ಯಪ್ಪಾ… ದೇವರೇ ಏನಿದು ಕೇಳೋಕೆ ಹೀಗೆ ಮೈ ಜುಂ ಎನ್ನಿಸ್ತಿದೆ. ಹೇಗ್ ತಿಂತಾರೇ ಅಂತ ಅಂದ್ಕೊಂಡ್ರೂ ಇದು ನಿಜ. ಫಿಲಿಫೈನ್ಸ್ ನಲ್ಲಿ ಇದು ಕಾಮನ್ ಡಿಶ್.. ಬಿಯರ್ ಜೊತೆ ಕೊಡಲಾಗುತ್ತೆ.
ಯಿಂಗ್ ಯಾಂಗ್ ಫಿಶ್ – ಚೈನಾ
ಕ್ರೂರತ್ವಕ್ಕೆ ಯಾವುದಾದ್ರೂ ಉದಾಹರಣೆ ಇದ್ರೆ ಅದು ಚೈನಾನೆ ಅಂತ ಹೇಳ್ತೀನಿ. ಅದಕ್ಕೆ ಪುಷ್ಟಿ ಈ ಡಿಶ್. ನಿಜ ಯಾಕಂದ್ರೆ ಮೀನನ್ನ ಜೀವಂತವಾಗಿಯೇ ಎಣ್ಣೆಯಲ್ಲಿ ಕರಿದು ಅದು ಇನ್ನೂ ಒದ್ದಾಡುತ್ತಲೇ ಬಾಯಿಯನ್ನ ಕಣ್ಣನ್ನ ಅಲುಗಾಡಿಸುತ್ತಿರುತ್ತೆ. ಅದನ್ನ ಪ್ಲೇಟ್ ಗೆ ಸರ್ವ್ ಮಾಡಿದ ನಂತರ ಆ ಮೀನಿನ ಒದ್ದಾಟವನ್ನ ಎಂಜಾಯ್ ಮಾಡುತ್ತಾ ಸವಿಯೋದನ್ನ ರಾಕ್ಷಸತ್ವಕ್ಕೆ ಉದಾಹರಣೆ ಅಂದ್ರೇ ಮತ್ತೇನ್ ಹೇಳೋದು..
ಸನ್ನಾಕ್ಜಿ ( ಬೇಬಿ ಆಕ್ಟೋಪಸ್ ) – ಸೌತ್ ಕೊರಿಯಾ
ಬೇಬಿ ಆಕ್ಟೋಪಸ್ ( ಚಿಕ್ಕ ಮರಿ) ಅನ್ನ ಬೇಯಿಸಿ ಅದಕ್ಕೆ ಇನ್ನೂ ಅರೆ ಜೀವ ಇರುವಾಗಲೇ, ಒದದಾಡುವಾಗಲೇ ಅದನ್ನ ಹಾಗೆಯೇ ತಿನ್ನೂತ್ತಾರೆ ಇಲ್ಲಿನ ಜನ. ಇದು ಇಲ್ಲಿನ ಫೇಮಸ್ ಡಿಶ್
ನಾಯಿ ಮಾಂಸ – ಚೈನಾ, ಉತ್ತರ ಕೊರಿಯಾ, ವೇಟ್ನಮ್
ಜನರ ಪ್ರೀತಿಯ ಸಾಕುಪ್ರಾಣಿಗಳಾದ ನಾಯಿಗಳನ್ನ ನಮ್ಮ ದೇಶ ಸೇರಿ ಹಲವೆಡೆ ಮಕ್ಕಳಂತೆ ಪ್ರೀತಿಯಿಂದ ಪಾಲನೆ ಪೋಷಣೆ ಮಾಡಲಾಗುತ್ತೆ. ಆದ್ರೆ ಅವುಗಳನ್ನ ತಿನ್ನೋಕೆ ಈ ಜನರಿಗೆ ಹೇಗಾದ್ರೂ ಮನಸ್ಸು ಬರುತ್ತೋ ಗೊತ್ತಿಲ್ಲ. ನಾರ್ತ್ ಕೊರಿಯಾದಲ್ಲಿ ಇದನ್ನ ತಿನ್ನೋ ಸಂಖ್ಯೆ ಕಡಿಮೆಯಿದೆ. ಆದ್ರೆ ವೇಟ್ನಮ್ ಮತ್ತೆ ಚೈನಾದಲ್ಲಿ ಇದನ್ನ ಹೆಚ್ಚಾಗಿ ತಿನ್ನುತ್ತಾರೆ ಅಲ್ಲಿನ ಜನರು. ಬೀದಿ ನಾಯಿಗಳು ಸಾಲದಕ್ಕೆ ಸಾಕು ನಾಯಿಗಳನ್ನ ಸಹ ಕಳ್ಳತನ ಮಾಡಿ ತಿಂತಾರೆ. ಇನ್ನೂ ಚೈನಾದಲ್ಲಿ ವರ್ಷಕ್ಕೊಮ್ಮೆ ಡಾಗ್ ಮೀಟ್ ಫೆಸ್ಟ್ ನಡೆಯುತ್ತೆ. ಈ ಮೇಳದಲ್ಲಿ ಸಾವಿರಾರು ನಾಯಿಗಳ ಮಾರಣಹೋಮವೇ ನಡೆದುಬಿಡುತ್ತೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel