ತಾಯಿಯ ಅಕ್ರಮ ಸಂಬಂಧ | ಮಗಳು ಮಾಡೇ ಬಿಟ್ಟಳು ಖತರನಾಖ್ ಪ್ಲ್ಯಾನ್
ಅಮರಾವತಿ: ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಮರ್ಮಾಂಗವನ್ನು ಮಗಳು ಕತ್ತರಿಸಿರುವ ಘಟನೆ ಆಂಧ್ರಪ್ರದೇಶದ ಬಪಟ್ಟಾ ಜಿಲ್ಲೆಯ ತುಮ್ಮಲಪಾಲಂನಲ್ಲಿ ನಡೆದಿದೆ.
ತಾಯಿಯು ರಾಮಚಂದ್ರ ರೆಡ್ಡಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಒಂದು ದಿನ ತಾಯಿ ಮತ್ತು ರಾಮಚಂದ್ರ ರೆಡ್ಡಿ ಮಗಲಗಿದ್ದರು. ಈ ವೇಳೆ ಮಗಳು ಇದನ್ನು ಕಂಡು ಕೋಪಗೊಂಡು ರಾಮಚಂದ್ರ ರೆಡ್ಡಿಯ ಮರ್ಮಾಂಗವನ್ನು ಬ್ಲೇಡಡಿನಿಂದ ಕತ್ತರಿಸಿದ್ದಾಳೆ.
ನಡೆದಿದ್ದೇನು?: 2 ವರ್ಷಗಳ ಹಿಂದೆ ಮಹಿಳೆಗೆ ಗುಂಟೂರು ಜಿಲ್ಲೆ ತೆನಾಲಿಯ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲ ಮಾಡುತ್ತಿದ್ದ ರಾಮಚಂದ್ರ ರೆಡ್ಡಿ ಎಂಬಾತ ಪರಿಚಯವಾಗಿತ್ತು. ಈ ಪರಿಚಯವು ಇಬ್ಬರ ಪ್ರೇಮಕ್ಕೆ ತಿರುಗಿತ್ತು. ಕ್ರಮೇಣ ಇಬ್ಬರೂ ಜೊತೆಗೂಡಿ ಮದ್ಯ ಸೇವಿಸುತ್ತಿದ್ದು, ಅದರ ಅಮಲಿನಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ನಡೆದಿತ್ತು.
ಆದರೆ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಮಗಳು ಕೂಡ ಇದ್ದಾಳೆ. ಆದರೂ ರಾಮಚಂದ್ರ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ತಾಯಿಯ ಈ ನಡವಳಿಕೆ ಮಗಳಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ತಾಯಿ-ಮಗಳ ಮಧ್ಯೆ ಇದೇ ವಿಚಾರಕ್ಕೆ ಆಗಾಗ ಜಗಳವಾಗುತಿತ್ತು.
ಅಕ್ರಮ ಸಂಬಂಧದ ವಿಷಯ ಮಗಳಿಗೆ ಗೊತ್ತಾದರೂ ಮಹಿಳೆ ತನ್ನ ಅಕ್ರಮ ಸಂಬಂಧ ಬಿಟ್ಟಿರಲಿಲ್ಲ. ಇದನ್ನು ನೋಡಿ ಸಾಕಾಗಿ ಹೋಗಿದ್ದಳು. ಹೀಗಾಗಿ ರಾತ್ರಿ ಪ್ರಿಯಕರನ ಜೊತೆ ತಾಯಿ ಮಲಗಿದ್ದಳು. ಇಬ್ಬರೂ ಗಾಢ ನಿದ್ದೆಯಲ್ಲಿದ್ದರು. ಈ ವೇಳೆ ಮಗಳು ಹರಿತವಾದ ಬ್ಲೇಡ್ ತೆಗೆದುಕೊಂದು ರೆಡ್ಡಿಯ ಮರ್ಮಾಂಗವನ್ನೇ ಕತ್ತರಿಸಿದಳು.
ಮರ್ಮಾಂಗ ಕಳೆದುಕೊಂಡ ರೆಡ್ಡಿ ಜೋರಾಗಿ ಕಿರುಚಿಕೊಂಡಿದ್ದಾನೆ. ನಂತರ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಆತನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








