ಮಂಡ್ಯ: ಅತ್ತೆ-ಸೊಸೆ ಎಂದರೆ ಬಹುತೇಕರು ಹಾವು-ಮುಂಗುಸಿಗೆ ಹೋಲಿಸುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ಸೊಸೆಯ ಸಾವಿನ ಸುದ್ದಿ ಕೇಳಿದ ಅತ್ತೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಈ ಘಟನೆ ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೊಸೆ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸೊಸೆ ಸುಶೀಲಾ (42) ನಿನ್ನೆ ಸಂಜೆ ಸಾವನ್ನಪ್ಪಿದ್ದರು. ಆದರೆ, ಸೊಸೆಯ ಸಾವಿನ ಸುದ್ದಿ ಕೇಳಿದ ಅತ್ತೆ ಹುಚ್ಚಮ್ಮ (75) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹೃದಯಾಘಾತಕ್ಕೆ ಬಲಿಯಾಗಿರುವ ಹುಚ್ಚಮ್ಮ ಅವರಿಗೆ ಐವರು ಗಂಡುಮಕ್ಕಳಿದ್ದು, ಅದರಲ್ಲಿ 2ನೇ ಮಗನ ಪತ್ನಿಯೇ ಸುಶೀಲಾ. ಸುಶೀಲಾಗೆ ಇಬ್ಬರು ಮಕ್ಕಳು ಇದ್ದರು. ಆದರೆ, ಅತ್ತೆಯೊಂದಿಗೆ ಸುಶೀಲಾ ತುಂಬಾ ಉತ್ತಮವಾಗಿಯೇ ಇದ್ದರು. ಆದರೆ, ಸಾವಿನ ಸುದ್ದಿ ಕೇಳಿ ಅತ್ತೆ ಕೂಡ ಸೊಸೆಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ.