ತಾಯಿಯ ತಮ್ಮನಿಂದ ನಿರಂತರ ಅತ್ಯಾಚಾರ – ವಿಷ ಸೇವಿಸಿದ ಅಪ್ರಾಪ್ತೆ

1 min read

ತಾಯಿಯ ತಮ್ಮನಿಂದ ನಿರಂತರ ಅತ್ಯಾಚಾರ – ವಿಷ ಸೇವಿಸಿದ ಅಪ್ರಾಪ್ತೆ

17 ವರ್ಷದ ಅಪ್ರಾಪ್ತೆ ಮೇಲೆ ಆಕೆಯ ತಾಯಿಯ ತಮ್ಮ (ಮಾಮ) ನಿರಂತರ ಅತ್ಯಾಚಾರ ನಡೆಸುತ್ತಿದ್ದ ಪರಿಣಾಮ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಂಜಾಬ್ ನ ಲೂಧಿಯಾನದಲ್ಲಿ ನಡೆದಿದೆ.

ಆದಮ್ ಪುರದ ನಿವಾಸಿಯಾಗಿದ್ದ 43 ವರ್ಷದ ಆರೋಪಿಯು ಅಪ್ರಾಪ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೇ ಆಕೆಯ ನಗ್ನ ಫೋಟೋಗಳನ್ನ ಕ್ಲಿಕ್ಕಿಸಿ ಯಾರಿಗೂ ಹೇಳದಂತೆ ಬ್ಲಾಕ್ ಮೇಲ್ ಸಹ ಮಾಡಿದ್ದಾನೆ.

ಸಂತ್ರಸ್ತೆಯು ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಈ ದುಷ್ಕೃತ್ಯದಿಂದಾಗಿ ಎಕ್ಸಾಮ್ಸ್ ನಲ್ಲಿ ಒಂದು ಪರೀಕ್ಷೆಗೆ ಹಾಜರಾಗಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಡಾಬಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಸಂತ್ರಸ್ತೆಯ ಪೋಷಕರು ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆರೋಪಿಯ ವಿರುದ್ಧ IPC ಸೆ. 376 (2) (n), ಸೆ. 506 ನ ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯು ಜಲಂಧರ್ ನಲ್ಲಿ ತನ್ನ ಅಜ್ಜಿ ತಾತನ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಲಾಕ್ ಡೌನ್ ವೇಳೆ ಅಂದ್ರೆ 2020ರ ಮೇ ನಲ್ಲಿ ಆಕೆಯ ಪೋಷಕರು ಲೂಧಿಯಾನದಲ್ಲಿ ತಮ್ಮ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದರು. ಈ ವೇಳೆ ಆರೋಪಿಯು ಆಕೆಯ ಕೋಲ್ಡ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ಕೊಟ್ಟಿದ್ದಾನೆ.

ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿ ಫೋಟೋಗಳನ್ನ ಕ್ಲಿಕ್ಕಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ಹೀಗಾಗಿ ಅಪ್ರಾಪ್ತೆಯು ಮನೆಯಲ್ಲಿ ಯಾರ ಬಳಿಯೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಇದಾದ ಬಳಿಕ ಮತ್ತೆ ಕೆಲ ತಿಂಗಳ ಬಳಿಕ ಆಕೆಯ ಮನೆಗೆ ಬಂದಿದ್ದ ಆರೋಪಿ ಯಾರು ಇಲ್ಲದನ್ನ ಗಮನಿಸಿ ಗನ್ ಪಾಯಿಂಟ್ ನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಸಂತ್ರಸ್ತೆ ಆರೋಪ ಮಾಡಿದ್ದಾಳೆ.

ಮತ್ತೆ ಮುಂದಿನ ತಿಂಗಳು ಮನೆಗೆ ಬಂದು ಆಕೆಯ ಪೋಷಕರನ್ನ ಒಪ್ಪಿಸಿ ಆಕೆಯನ್ನ ಬುಕ್ಸ್ ತರೋ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾನೆರ. ಆದ್ರೆ ಅಲ್ಲಿಂದ ಆಕೆಯನ್ನ ಅಪರಿಚಿತ ಸ್ಥಳಕ್ಕೆ ಎಳೆದುಕೊಂಡು ಹೋಗಿ ಮತ್ತೆ ಮತ್ತೆ ಅತ್ಯಾಚಾರವೆಸಗಿದ್ದಾನೆ.

ಇಷ್ಟಕ್ಕೆ ನಿಲ್ಲದೇ ಮತ್ತೆ 2021ರ ಫೆಬ್ರವರಿಯಲ್ಲೂ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇನ್ನೂ ಆತ ಸಂತ್ರಸ್ತೆಯ ಮನೆಯಲ್ಲೇ ಉಳಿದುಕೊಂಡಿದ್ದರಿಂದ ಮಾಸಿಕವಾಗಿ ತುಂಬ ಡಿಸ್ಟರ್ಬ್ ಆಗಿ ಕುಗ್ಗಿ ಹೋಗಿದ್ದ ಅಪ್ರಾಪ್ತೆಯು ಜಲಂಧರ್ ಗೆ ತೆರಳಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದಾದ ಬಳಿಕ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದಾಳೆ. ಸಂತ್ರಸ್ತೆಯ ಹೇಳಿಕೆ ಪಡೆದಿರುವ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಆರಂಭಿಸಿದ್ದಾರೆ.

1 ವರ್ಷದಿಂದ ಮಗಳ ಮೇಲೆ ನಿರಂತರ ಅತ್ಯಾಚಾರ – ತಂದೆ ಅರೆಸ್ಟ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd