Moto Tab G62 – 10.61 ಇಂಚಿನ ಡಿಸ್ಪ್ಲೇ ಹೊಂದಿರುವ ಮೊಟೊರೊಲಾ ಟ್ಯಾಬ್ ಬಿಡುಗಡೆ
ಮೊಟೊರೊಲಾ ಕಂಪನಿ ತನ್ನ ಹೊಸ ಟ್ಯಾಬ್ Moto Tab G62 ನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. Moto Tab G62 ಟ್ಯಾಬ್ ಸ್ನ್ಯಾಪ್ ಡ್ರಾಗನ್ 680 ಪ್ರೊಸೆಸರ್, 4 GB LPDDR4X RAM ನೊಂದಿಗೆ ಬಿಡುಗಡೆಯಾಗುತ್ತಿದೆ. ಅಲ್ಲದೇ ಬ್ಲೂ ಲೈಟ್ ಗಾಗಿ TUV ರೈನ್ಲ್ಯಾಂಡ್ ಸರ್ಟಿಫಿಕೆಟ್ ನ್ನ ಸಹ ಪಡೆದುಕೊಂಡಿದೆ. Moto Tab G62 ನಲ್ಲಿ 2K ಡಿಸ್ಪ್ಲೆಯನ್ನ ನೀಡಲಾಗಿದೆ. 8 ಮೆಗಾಪಿಕ್ಸೆಲ್ ಆಟೋ ಫೋಕಸ್ ಪ್ರೈಮರಿ ಕ್ಯಾಮೆರಾವನ್ನ ಹಿಂಬದಿಯಲ್ಲಿ ನೀಡಲಾಗಿದೆ.
Moto Tab G62 ಟ್ಯಾಬ್ ಬೆಲೆ
Moto Tab G62 ನ Wi-Fi ಮಾಡೆಲ್ ನ ಬೆಲೆ 15,999 ರೂ. LTE ರೂಪಾಂತರದ ಬೆಲೆ 17,999 ರೂ ಗೆ ನಿಗದಿಪಡಿಸಲಾಗಿದೆ. Moto Tab G62 ಅನ್ನು ಫ್ಲಿಪ್ಕಾರ್ಟ್ನಲ್ಲಿ ಆರ್ಡರ್ ಮಾಡಬಹುದು. ಫ್ರಾಸ್ಟ್ ಬ್ಲೂ ಬಣ್ಣದಲ್ಲಿ ಲಭ್ಯವಿದೆ. Moto Tab G62 ಆಗಸ್ಟ್ 22 ರಿಂದ ಮಾರಾಟವಾಗುತ್ತಿದ್ದು, ಪ್ರಸ್ತುತ ಮುಂಗಡ ಬುಕ್ಕಿಂಗ್ ನಡೆಯುತ್ತಿದೆ.
Moto Tab G62 ಫೀಚರ್ಸ್ ಗಳು
ಆಂಡ್ರಾಯ್ಡ್ 12 ಆಪರೆಟಿಂಗ್ ಸಿಸ್ಟಮ್ Moto Tab G62 ಕಾರ್ಯ ನಿರ್ವಹಿಸುತ್ತದೆ. 4G ನೆಟ್ವರ್ಕ್ಗೆ ಸಪೋರ್ಟಿಂಗ್ ಇದೆ. ಮೊಟೊರೊಲಾದ ಈ ಟ್ಯಾಬ್ನಲ್ಲಿ ಮೆಮೊರಿ ಕಾರ್ಡ್ಗೆ ಪ್ರತ್ಯೇಕ ಸ್ಲಾಟ್ ನೀಡಲಾಗಿದೆ. ಟ್ಯಾಬ್ ನಲ್ಲಿ 10.61-ಇಂಚಿನ IPS LCD ಡಿಸ್ಪ್ಲೇ ಜೊತೆಗೆ 2K+ (2,000×1,200 pixels) ರೆಸಲ್ಯೂಶನ್ ಹೊಂದಿದೆ.
ಡಿಸ್ಪ್ಲೆಅಳೆತಯ ಅನುಪಾತವು 16:10. Moto Tab G62 LTE ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಜೊತೆಗೆ 4GB LPDDR4X RAM ಮತ್ತು 64GB ಮೆಮೋರಿ ಹೊಂದಿದೆ, ಮೆಮೊರಿ ಕಾರ್ಡ್ನ ಸಹಾಯದಿಂದ 1TB ವರೆಗೆ ವಿಸ್ತರಿಸಬಹುದು. ಇನ್ನೂ ವಾಟರ್ ರೆಸಿಸ್ಟೆನ್ಸ್ ಗಾಗಿ IP52 ರೇಟಿಂಗ್ ಪಡೆದುಕೊಂಡಿದೆ.
ಮುಂಭಾಗದಲ್ಲೂ 8 ಮೆಗಾಪಿಕ್ಸೆಲ್ ಅಟೋಪೋಸ್ ಕ್ಯಾಮೆರಾ ನೀಡಲಾಗಿದೆ. 1080p ವಿಡಿಯೋ ಗಳನ್ನ ರೆಕಾರ್ಡ್ ಮಾಡಬಹುದು..
Moto Tab G62 ನಲ್ಲಿ Dolby Atmos ಕ್ವಾಡ್ ಸ್ಪೀಕರ್ಗಳನ್ನ ನೀಡಲಾಗಿದೆ. ಕನೆಕ್ಟಿವಿಟಿಗಾಗಿ ಬ್ಲೂಟೂತ್ v5.1, ಡ್ಯುಯಲ್-ಬ್ಯಾಂಡ್ Wi-Fi, USB ಟೈಪ್-C ಪೋರ್ಟ್ ಮತ್ತು 3.5mm ಹೆಡ್ಫೋನ್ ಜ್ಯಾಕ್ನೊಂದಿಗೆ ಬರುತ್ತದೆ. ಟ್ಯಾಬ್ನಲ್ಲಿ ಫೇಸ್ ಅನ್ಲಾಕ್ ಕೂಡ ಇದೆ. Moto Tab G62 20W ಚಾರ್ಜಿಂಗ್ಗೆ ಬೆಂಬಲದೊಂದಿಗೆ 7700mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.