ಮುಂದಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟ ದುಬೈಯಲ್ಲಿ ನಡೆಯಲಿದೆ ಎಂದು ಬಿ ಸಿ ಸಿ ಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು. ಇದರಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾಗವಹಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಈಗಾಗಲೇ ನಿರ್ಧಾರವಾದಂತೆ ಮುಂದಿನ ಏಷ್ಯಾ ಕಪ್ ಪಾಕಿಸ್ತಾನಲ್ಲಿ ನಡೆಯಬೇಕಿತ್ತು. ಆದರೆ ಭಾರತ ಈಗಾಗಲೇ ಸೂಕ್ತ ಭದ್ರತೆ ಪಾಕಿಸ್ತಾನದಲ್ಲಿ ಅಸಾಧ್ಯ ಎಂದು ನಿರ್ಧರಿಸಿ ಪ್ರವಾಸ ಮೊಟಕುಗೊಳಿಸಲು ತೀರ್ಮಾನಮಾಡಿತ್ತು.
ದುಬೈ ನಲ್ಲಿ ನಡೆಯಲಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಗೆ ಹೊರಡುವ ಮೊದಲು ಕ್ರಿಕೆಟ್ ಕಾಶಿ ಈಡನ್ ಗಾರ್ಡನಲ್ಲಿ ಸುದ್ದಿಗೋಷ್ಠಿ ನಡೆಸಿದ ಗಂಗೂಲಿ ಮುಂದಿನ ಏಷ್ಯಾ ಕಪ್ ದುಬೈನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಹಿಳಾ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಸೆಮಿಫೈನಲ್ ಗೆ ತಲುಪಿದ್ದು ಉತ್ತಮ ತಂಡ ಹೊಂದಿದೆ ಅಂತ ಅಭಿಪ್ರಾಯಪಟ್ಟರು. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ಕೊಹ್ಲಿ ಪಡೆ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿ ಸಮಬಲ ಮಾಡಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.