ಸಂಸದ ಸಂಗಣ್ಣ ಕರಡಿ ಸಹೋದರ ಬಸಣ್ಣ ಕರಡಿ ರಸ್ತೆ ಅಫಘಾತದಲ್ಲಿ ಸಾವು

1 min read

ಸಂಸದ ಸಂಗಣ್ಣ ಕರಡಿ ಸಹೋದರ ಬಸಣ್ಣ ಕರಡಿ ರಸ್ತೆ ಅಫಘಾತದಲ್ಲಿ ಸಾವು

ಕೊಪ್ಪಳ ಕ್ಷೇತ್ರದ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರ  ಸಹೋದರ ಬಸಣ್ಣ ಕರಡಿ ಅವರು ರಸ್ತೆ  ಅಫಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕೊಪ್ಪಳ ತಾಲೋಕಿನ ಟಣಕನಲ್ ನಿವಾಸಿಯಾಗಿರುವ  68 ವರ್ಷದ  ಬಸವರಾಜ (ಬಸಣ್ಣ ) ಕರಡಿ ಅವರು  ಊರಿನ ಸಮೀದ  ಹನುಮನಹಳ್ಳಿ ಗ್ರಾಮಕ್ಕೆ  ಸ್ಕೂಟಿಯಲ್ಲಿ ತೆರಳುತ್ತಿದ್ದಾಗ  ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.  ಮೃತರು  ಪತ್ನಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ.

ನಗರದ ಕೆ ಎಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡಿಸಿ  ನಂತರ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.  ಸುದ್ದಿ ತಿಳಿಯುತ್ತಲೇ  ನವದೆಹಲಿಯಲ್ಲಿರುವ ಸಂಗಣ್ಣ ಕರಡಿ  ಟಣಕನಲ್ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MP karadi Sanganna’s brother dies on spot in road accident

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd