ಮೈಸೂರು ರಸ್ತೆಯಲ್ಲಿ ಅಪಘಾತ ಮಾನವೀಯತೆ ಮೆರೆದ ಸಂಸದ ಪ್ರತಾಪ್ ಸಿಂಹ

1 min read

ಮೈಸೂರು ರಸ್ತೆಯಲ್ಲಿ ಅಪಘಾತ ಮಾನವೀಯತೆ ಮೆರೆದ ಸಂಸದ ಪ್ರತಾಪ್ ಸಿಂಹ

ಬೆಂಗಳೂರು – ಮೈಸೂರು ರಸ್ತೆಯ ಚೆನ್ನಪಟ್ಟಣದ ಮುಗಿಗೆರೆ ಬಳಿ ಇನ್ನೋವ್ ಕಾರ್ ನ ಟೈರ್ ಬ್ಲಾಸ್ಟ್ ಆಗಿ ಅಪಘಾತಗೊಂಡ  ಪ್ರಯಾಣಿಕರಿಗೆ  ಸಂಸದ ಪ್ರತಾಪ್ ಸಿಂಹ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ಅದೃಷ್ಠ ವಶಾತ್ ಯಾವುದೇ ಪ್ರಾಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ.

ಈ ಸಮಯದಲ್ಲಿ ಅಪಘಾತಕ್ಕೀಡಾದ ಕಾರು ಪ್ರತಾಪ್ ಸಿಂಹ ಅವರದ್ದೆ ಎನ್ನುವ ಗಾಳಿ ಸುದ್ದಿ ಹಬ್ಬಿತ್ತು.  ಈ ಬಗ್ಗೆ ವೀಡಿಯೊ ಮೂಲಕ ಪ್ರತಾಪ್ ಸಿಂಹ ಅವರು ಸ್ಪಷ್ಟನೆ ನೀಡಿದ್ದಾರೆ.

ಅಪಘಾತಕ್ಕೀಡಾಗಿರುವ ಕಾರು ನನ್ನದು  ಎಂದು ಎಲ್ಲರೂ ಭಯಗೊಂಡಿದ್ದರು. ಹಲವಾರು ಹಿತೈಷಿಗಳು ನನಗೆ ಕರೆ ಮಾಡಿ ‌ವಿಚಾರಿಸುತ್ತಿದ್ದರು. ಅಪಘಾತವಾದ ಕಾರು ನನ್ನದಲ್ಲ, ಅದು ಕೇರಳ ಮೂಲದವರದ್ದು  ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ವಾಪಸ್ ಬರುವಾಗ ಹೊಟೆಲ್ ನಲ್ಲಿ ಊಟ ಮಾಡಲೆಂದು ಕಾರು ನಿಲ್ಲಿಸಿದ್ದೆ. ಆಗ ಇನ್ನೋವಾ ಕಾರಿನ ಟೈಯರ್​ ಸ್ಫೋಟಗೊಂಡು ಮಗುಚಿ ಬಿತ್ತು. ಕೂಡಲೇ ನಾನು, ನನ್ನ ಗನ್ ಮ್ಯಾನ್​, ಚಾಲಕ ಕಾರಿನ ಬಳಿ ಹೋಗಿ ಅದರಲ್ಲಿದ್ದ ಗಂಡ, ಹೆಂಡತಿ, ಮಗಳು, ಚಾಲಕ ಸೇರಿ ನಾಲ್ವರನ್ನು ಹೊರಗೆಳೆದು ರಕ್ಷಿಸಿದೆವು. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಸಂಚಾರಿ ಪೊಲೀಸರನ್ನು ಕರೆಯಿಸಿ ಮಹಜರು ಮಾಡಿಸಿದೆವು. ಅವರಿಗೆ ಬೇರೊಂದು ಕಾರಿನ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳುಹಿಸಿ ಕೊಟ್ಟೆವು’ ಎಂದು ಹೇಳಿದ್ದಾರೆ.

ಮಾನವೀಯತೆ ಮೆರೆಯಿರಿ

ಅಪಘಾತವಾದರೂ ಯಾರೂ ವಾಹನಗಳನ್ನು ನಿಲ್ಲಿಸದೆ ಮುಂದೆ ಹೋಗಿದ್ದಕ್ಕೆ ಸಂಸದರು ಬೇಸರ ವ್ಯಕ್ತ ಪಡಿಸಿದರು  ಜನರು ಸಂವೇದನೆ ಇಲ್ಲದೆ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾರೆ. ಮಾನವೀಯತೆಯ  ದೃಷ್ಟಿಯಿಂದ ಅಪಘಾತದ ಸಮಯದಲ್ಲಿ ಸಹಾಯಕ್ಕೆ ಧಾವಿಸಿ‌’ ಎಂದು ಜನರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd