ಕುಕ್ಕುಟೋದ್ಯಮಕ್ಕೆ ಮಿಸ್ಟರ್ ಕೂಲ್
ಕೋಳಿ ಸಾಕಾಣಿಕೆಗೆ ಮುಂದಾದ ಧೋನಿ
ರಾಂಚಿ : ಮಿಸ್ಟರ್ ಕೂಲ್, ಎಂಎಸ್ ಧೋನಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರೋದು ಎಲ್ಲರಿಗೂ ಗೊತ್ತೆ ಇದೆ.
ನಿವೃತ್ತಿ ಬಳಿಕ ಧೋನಿ ಏನ್ ಮಾಡ್ತಾರೆ… ಯಾವುದಾದರೂ ಹೊಸ ಬಿಸಿನೆಸ್ ಶುರು ಮಾಡ್ತಾರಾ..? ರಾಜಕೀಯಕ್ಕೆ ಬರ್ತಾರಾ ಎಂಬ ಪ್ರಶ್ನೆಗಳು ಸದ್ದು ಮಾಡುತ್ತಿವೆ.
ಆದ್ರೆ ಮಿಸ್ಟರ್ ಕೂಲ್ ಎಂಎಸ್ ಡಿ ಈ ಎಲ್ಲ ಚರ್ಚೆಗಳಿಗೆ ಫುಲ್ ಸ್ಟಾರ್ ಇಟ್ಟು, ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ..!

ಹೌದು..! ಇದು ಅಚ್ಚರಿ ಅನಿಸಿದರೂ ನಂಬಲೇಬೇಕಾದ ಸತ್ಯ.. ಮಧ್ಯ ಪ್ರದೇಶದ ಬುಡಕಟ್ಟು ಜಿಲ್ಲೆಯ ಕಡಕ್ ನಾಥ್ ಕಪ್ಪು ಕೋಳಿಗಳು ಧೋನಿಯ ಮನಗೆದ್ದಿವೆ. ಹೀಗಾಗಿ ಎಂಎಸ್ ಡಿ ನಿವೃತ್ತಿ ಬಳಿಕ ಕುಕ್ಕುಟೋದ್ಯಮಕ್ಕೆ ಧುಮುಖಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಧೋನಿ ಅವರ ಸಾವಯವ ಕೃಷಿಗೆ ಸಂಬಂಧಿಸಿದ ತಂಡ ಸುಮಾರು 2 ಸಾವಿರ ಕಟಕ್ ನಾಥ್ ಕೋಳಿ ಮರಿಗಳನ್ನು ಅರ್ಡರ್ ಮಾಡಿದೆ. ಜಬುವಾ ಜಿಲ್ಲೆಯ ರೈತ ವಿನೋದ್ ಮೇಧಾ ಅವರಿಗೆ ಡಿಸೆಂಬರ್ 15ರ ವೇಳೆಗೆ ಸುಮಾರು 2 ಸಾವಿರ ಕೋಳಿ ಮರಿಗಳನ್ನು ನೀಡುವಂತೆ ಧೋನಿ ಟೀಂ ಅರ್ಡರ್ ಮಾಡಿದೆ.
ಈ ಬಗ್ಗೆ ರೈತ ವಿನೋದ್ ಮಾತನಾಡಿ, ಧೋನಿ ಫಾರ್ಮ್ ಮ್ಯಾನೇಜರ್ ಮೂರು ತಿಂಗಳ ಹಿಂದೆ ನಮ್ಮೊಂದಿಗೆ ಕೃಷಿ ವಿಕಾಸ್ ಕೇಂದ್ರದ ಮೂಲಕ ಸಂಪರ್ಕಕ್ಕೆ ಬಂದಿದ್ದರು.
ಬಳಿಕ ನಮ್ಮ ಬಳಿ ಕೋಳಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಸುಮಾರು 2 ಸಾವಿರ ಮರಿಗಳನ್ನು ಆರ್ಡರ್ ನೀಡಿದ್ದಾರೆ. ಎರಡು ಸಾವಿರ ಕೋಳಿ ಮರಿಗಳನ್ನು ನಾನು ಡಿಸೆಂಬರ್ 15ರಂದು ರಾಂಚಿಯಲ್ಲಿ ಅವರಿಗೆ ನೀಡಬೇಕಿದೆ.

ಇದಕ್ಕೆ ಅವರು ಈಗಾಗಲೇ ಅಡ್ವಾನ್ಸ್ ನೀಡಿದ್ದಾರೆ. ಖ್ಯಾತ ಕ್ರಿಕೆಟ್ ಆಟಗಾರನಿಗೆ ಕಡಕ್ ನಾಥ್ ಕೋಳಿಗಳನ್ನು ಪೂರೈಕೆ ಮಾಡುತ್ತಿರುವುದು ಹೆಮ್ಮೆ ಎನಿಸಿದೆ ಎಂದಿದ್ದಾರೆ.
ಕಡಕ್ ನಾಥ್ ಕೋಳಿಯೇ ಯಾಕೆ..?
ಕಡಕ್ ನಾಥ್ ಕೋಳಿ ಮಧ್ಯಪ್ರದೇಶದ ಬುಡಕಟ್ಟು ಮೂಲದಾಗಿದ್ದಾಗಿದೆ. ಈ ಕೋಳಿಯ ಮಾಂಸ, ಮೊಟ್ಟೆಗೆ ದೇಶಾದ್ಯಂತ ಭಾರೀ ಬೇಡಿಕೆ ಇದೆ. ಈ ಕೋಳಿಯ ಮಾಂಸದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುತ್ತದೆ.