ಎಮ್.ಎಸ್. ಧೋನಿಗೂ ಇನ್ಫೋಸಿಸ್ ಸಂಸ್ಥೆಗೂ ಏನು ಬಾಂಧವ್ಯ..?
7-7-1981…!
ಈ ದಿನಾಂಕದಲ್ಲೊಂದು ವಿಶೇಷತೆ ಇದೆ. ಕ್ರಿಕೆಟ್ ಅಭಿಮಾನಿಗಳಿಗೆ ಈ ದಿನಾಂಕ ನೆನಪು ಇದ್ದೇ ಇರುತ್ತೆ. ಯಾಕಂದ್ರೆ ಅದು ಮಹೇಂದ್ರ ಸಿಂಗ್ ಧೋನಿಯ ಹುಟ್ಟುಹಬ್ಬದ ದಿನ. ಜಾರ್ಖಂಡ್ ನ ರಾಂಚಿಯಲ್ಲಿ ಹುಟ್ಟಿ ಬೆಳೆದ ಧೋನಿ ವಿಶ್ವ ಕ್ರಿಕೆಟಿಗನಾಗಿ ರೂಪುಗೊಂಡಿದ್ದು ಈಗ ಇತಿಹಾಸ.
ಆದ್ರೆ ಅದೇ ದಿನ ಅಂದ್ರೆ 7-71981ರಂದು ಪುಣೆಯಲ್ಲಿ ಕರ್ನಾಟಕದ ನಾರಾಯಣ ಮೂರ್ತಿಯವರ ಕನಸಿನ ಇನ್ಫೀಸಿಸ್ ಸಂಸ್ಥೆಯು ಆರಂಭಗೊಂಡ ದಿನ. ಭಾರತದ ಮೊದಲ ಐಟಿ ಕಂಪೆನಿ ಎಂಬ ಹೆಗ್ಗಳಿಕೆ ಪಡೆದಿರುವ ಇನ್ಫೋಸಿಷ್ ಇಂದು ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಅಂದು ಧೋನಿ ಅಪ್ಪ -ಅಮ್ಮ ನಿಗೆ ತನ್ನ ಮಗ ವಿಶ್ವ ಕ್ರಿಕೆಟ್‍ನ ಹೀರೋ ಆಗುತ್ತಾನೆ ಅನ್ನೋ ಸಣ್ಣ ಕಲ್ಪನೆಯೂ ಇರಲಿಲ್ಲ. ಅದೇ ರೀತಿ ನಾರಾಯಣ ಮೂರ್ತಿ ಮತ್ತು ಗೆಳೆಯರು ಸೇರಿಕೊಂಡು ಇನ್ಪೋಸಿಸ್ ಸಂಸ್ಥೆಗೆ ಅಡಿಪಾಯ ಹಾಕಿದ್ದರು. ಕೇವಲ 250 ಡಾಲರ್ ನೊಂದಿಗೆ ಶುರುವಾದ ಇನ್ಫೋಸಿಸ್ ಕಂಪೆನಿಯಲ್ಲಿ ಇಂದು ಸುಮಾರು 239 ಸಾವಿರ ಉದ್ಯೋಗಿಗಳಿದ್ದಾರೆ. 12.77 ಬಿಲಿಯನ್ ಡಾಲರ್ ಕಂಪೆನಿಯಗಿದೆ. ಕಂಪೆನಿಯ ಮೌಲ್ಯ 41.14 ಬಿಲಿಯನ್ ಎಂದು ಅಂದಾಜಿಸಲಾಗಿದೆ.
ಅದೇ ರೀತಿ ಮಹೇಂದ್ರ ಸಿಂಗ್ ಧೋನಿ ಫುಟ್‍ಬಾಲ್ ಆಡುತ್ತಾ, ಬಳಿಕ ಕ್ರಿಕೆಟ್‍ನಲ್ಲಿ ವಿಕೆಟ್ ಕಿಪಿಂಗ್ ಮಾಡುತ್ತಾ, ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು. ಬಳಿಕ ಟೀಮ್ ಇಂಡಿಯಾಗೆ ಸೇರಿಕೊಂಡ ಧೋನಿ ಆಟಗಾರನಾಗಿ, ನಾಯಕನಾಗಿ ಕೋಟಿ ಕೋಟಿ ಅಭಿಮಾನಿಗಳ ಹೀರೋ ಆಗಿದ್ದಾರೆ. ಹಾಗೇ ಧೊನಿ ಕೋಟಿ ಕೋಟಿಗಳ ಲೆಕ್ಕಚಾರದಲ್ಲಿ ಬೆಲೆ ಬಾಳುತ್ತಾರೆ.
ಕಠಿಣ ಶ್ರಮ, ಪರಿಶ್ರಮ, ನಾಯಕತ್ವದ ಗುಣದಿಂದಲೇ ಧೋನಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಇನ್ಫೋಸಿಸ್ ಸಂಸ್ಥೆಯು ಕೂಡ ಬದ್ಧತೆ, ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಇಂದು ಬೃಹತ್ ಸಂಸ್ಥೆಯಾಗಿದೆ. ಧೋನಿ ಕೂಡ ಮಧ್ಯಮ ಕುಟುಂಬದಿಂದ ಬಂದವರು. ಹಾಗೇ ನಾರಾಯಣ ಮೂರ್ತಿ ಅವರು ಕೂಡ ಮಧ್ಯಮ ಕುಟುಂಬದಿಂದ ಬೆಳೆದು ಬಂದವರು. ಇಂದು ಧೋನಿ ವಿಶ್ವ ಕ್ರಿಕೆಟ್ ನಲ್ಲಿ ರಾರಾಜಿಸಿದ್ರೆ, ಇನ್ಫೋಸಿಸ್ ವಿಶ್ವ ಐಟಿ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಥಾನದಲ್ಲಿದೆ.