IPL 2022 | ಐಪಿಎಲ್ ನ ಗ್ರೇಟ್ ಫಿನಿಶರ್ ಯಾರು..?
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸಾಕಷ್ಟು ಅದ್ಭುತ ಆಟಗಾರರ ಆಡಿದ್ದಾರೆ. ವಿಶ್ವದ ವಿಧ್ವಂಸಕ ಬ್ಯಾಟರ್ ಗಳು ಒಂಟಿ ಕೈಯಲ್ಲಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಆದ್ರೆ ಐಪಿಎಲ್ ನ ಗ್ರೇಟ್ ಫಿನಿಶರ್ ಯಾರು ಅಂತಾ ಬಂದಾಗ ಹಲವರ ಹೆಸರು ಮುನ್ನಲೆಗೆ ಬರುತ್ತದೆ.
ಇದೀಗ ಈ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಪ್ರತಿಕ್ರಿಯೆ ನೀಡಿದ್ದು, ಎಂಎಸ್ ಧೋನಿ ಐಪಿಎಲ್‌ನಲ್ಲಿ ಅತ್ಯುತ್ತಮ ಫಿನಿಶರ್ ಎಂದು ಹೊಗಳಿಸಿದ್ದಾರೆ.
ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಧೋನಿ ತಮ್ಮದೇ ಶೈಲಿಯಲ್ಲಿ ಮುಗಿಸಿದ್ರು.
“ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಫಿನಿಶರ್ ಆಗಿದ್ದಾರೆ.+
ಧೋನಿ ಐಪಿಎಲ್‌ನಿಂದ ನಿರ್ಗಮಿಸಿದ ನಂತರ, ಈ ಪಟ್ಟಿಗೆ ಇನ್ನೊಬ್ಬರು ಸೇರಬಹುದು. ಆದರೆ ಧೋನಿಯಂತಹ ಶ್ರೇಷ್ಠ ಫಿನಿಶರ್‌ಗಳು ಸೇರ್ಪಡೆಯಾಗುವುದಿಲ್ಲ ಎಂದು ಇರ್ಫಾನ್ ವಾದಿಸಿದ್ದಾರೆ.
ಇನ್ನು ಸಿಎಸ್ ಕೆ ತಂಡದ ಬಗ್ಗೆ ಹೇಳುವುದಾದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಾವುದೇ ತಂಡ ಕಮ್ಮಿಯಾಗಿ ಅಂದಾಜಿಸಬಾರದು.
ಏಕೆಂದರೆ ಹಲವು ಬಾರಿ ಸೋಲಿನ ಅಂಚಿನಿಂದ ಚೆನ್ನ ಸೂಪರ್ ಕಿಂಗ್ಸ್ ತಂಡ ಗೆಲುವಿನ ದಡ ತಲುಪಿದೆ.
ಲೀಗ್ ಇತಿಹಾಸದಲ್ಲಿ ಸಿಎಸ್‌ಕೆ ಅತ್ಯಂತ ಅಪಾಯಕಾರಿ ತಂಡವಾಗಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಪ್ರಸಕ್ತ ಋತುವಿನಲ್ಲಿ 7 ಪಂದ್ಯಗಳನ್ನು ಆಡಿರುವ ಸಿಎಸ್ ಕೆ ಎರಡು ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಸೋಮವಾರ ಸಿಎಸ್‌ಕೆ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ms-dhoni greatest-finisher-irfan patan