ವಿಸಿಲ್ ಪೋಡು..!! ಈ ಬಾರಿಯೂ ಚೆನ್ನೈಯೇ ಚಾಂಪಿಯನ್..
ಇಂಡಿಯಲ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾಸ್ ಫಾಲೋಯಿಂಗ್ ಇದೆ. ಪ್ರತಿ ಬಾರಿ ಐಪಿಎಲ್ ಶುರುವಾದಾಗಲೂ ಚೆನ್ನೈ ತಂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ. ತಂಡದಲ್ಲಿ ಸ್ಟಾರ್ ಆಟಗಾರರು ಇರಲಿ.. ಇಲ್ಲದಿರಲಿ ಚೆನ್ನೈ ತಂಡ ಯಾವುದೇ ಸೀಸನ್ ನಲ್ಲೂ ಟ್ರೋಫಿ ಗೆಲ್ಲುವ ಫೇವರೆಟ್ ತಂಡ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಎಂ.ಎಸ್. ಧೋನಿ..!!
ಹೌದು..! ಧೋನಿ ಇದ್ದಲ್ಲಿ ಎಲ್ಲವೂ ಸಾಧ್ಯ. ತಂಡದಲ್ಲಿ ಏನೇ ಕೊರತೆ ಇರಲಿ.. ಅದಕ್ಕೆ ಬೇಕಾದ ಮುಲಾಮು ರೆಡಿ ಮಾಡಿ, ಎದುರಾಳಿಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆದು ಪಂದ್ಯವನ್ನು ಗೆಲ್ಲಿಸುವ ಮಾಸ್ಟರ್ ಮೈಂಡ್ ಧೋನಿ ಅವರದ್ದು..!
ಅಂದಹಾಗೆ ಎಂ.ಎಸ್.ಧೋನಿಗೆ ಈ ಬಾರಿಯ ಇಂಡಿಯಲ್ ಪ್ರೀಮಿಯರ್, ಕೊನೆಯ ಐಪಿಎಲ್ ಆಗುವ ಸಾಧ್ಯತೆಗಳಿವೆ. ಕಳೆದ ಐಪಿಎಲ್ ವೇಳೆ ಧೋನಿ ನಿವೃತ್ತಿಯ ಸುಳಿವನ್ನು ನೀಡಿದರು. ಚೆನ್ನೈನಲ್ಲಿಯೇ ಕೊನೆಯ ಪಂದ್ಯ ಅಂತ ಹೇಳಿ ಎಲ್ಲರ ಕಿವಿ ನೆಟ್ಟಿಗೆ ಆಗುವಂತೆ ಮಾಡಿದರು.
ಈಗ ಹೊಸ ವಿಚಾರ ಏನೂ ಅಂದ್ರೆ ಸಿಎಸ್ ಕೆ ತಂಡದ ಸಾರಥಿಯಾಗಿರುವ ಧೋನಿ, ಚೆನ್ನೈ ತಲುಪಿದ್ದಾರೆ. ಈ ಬಾರಿಯ ಐಪಿಎಲ್ ಗೆ ಸಿದ್ಧತೆ ನಡೆಸಲು ಧೋನಿ ಚೆನ್ನೈಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ IPL-2022 ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹೀಗಾಗಿ ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸಬೇಕು ಅನ್ನೋ ಲೆಕ್ಕಾಚಾರಗಳನ್ನು ಮ್ಯಾನೇಜ್‌ಮೆಂಟ್‌ನೊಂದಿಗೆ ಚರ್ಚಿಸಲಿದ್ದಾರೆ. ಇದಲ್ಲದೇ ಹರಾಜಿನ ವೇಳೆ ಸ್ವತಃ ಎಂಎಸ್ ಧೋನಿ ಹಾಜರಿರಲಿದ್ದಾರಂತೆ.
ಇತ್ತ ಈ ಬಾರಿಯ ಐಪಿಎಲ್ ಕೊನೆಯದ್ದಾಗಿರುವುದರಿಂದ ಧೋನಿಗೆ ಗೆಲುವಿನ ವಿದಾಯ ಕೊಡಲು ಫ್ರಾಂಚೈಸಿ ಕೂಡ ಪ್ಲಾನ್ ಮಾಡಿಕೊಂಡಿದೆ. ಅದಕ್ಕಾಗಿಯೇ ಚೆನ್ನೈ ಫ್ರಾಂಚೈಸಿ ಧೋನಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಆಟಗಾರರ ಖರೀದಿಯಿಂದ ಹಿಡಿದು ತಂಡದ ಆಯ್ಕೆವರೆಗೂ ಎ ಟು ಝಡ್ ಎಲ್ಲವೂ ಧೋನಿಯೇ ನೋಡಿಕೊಳ್ಳಲಿದ್ದಾರಂತೆ. ಧೋನಿಯ ಈ ಪ್ರಿಪರೇಷನ್ ನೋಡಿದ್ರೆ ಚೆನ್ನೈ ತಂಡ ಈ ಬಾರಿಯೂ ಚಾಂಪಿಯನ್ ಆಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.