ಕೋವಿಡ್ ಟೆಸ್ಟ್ ನಲ್ಲಿ ಧೋನಿ ಪಾಸ್..! ಆಗಸ್ಟ್ 15ರಿಂದ ಚೆನ್ನೈ ಕ್ಯಾಂಪ್ ನಲ್ಲಿ ಕೂಲ್ ಕ್ಯಾಪ್ಟನ್
ಕೋವಿಡ್-19 ಟೆಸ್ಟ್ ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪಾಸಾಗಿದ್ದಾರೆ. ಸಿಎಸ್ಕೆ ಕ್ಯಾಂಪ್ ಸೇರುವ ಮುನ್ನ ಧೋನಿ ತನ್ನ ತವರೂರಾದ ರಾಂಚಿಯಲ್ಲಿ ಕೋವಿಡ್ ಟೆಸ್ಟ್ಗೆ ಒಳಪಟ್ಟಿದ್ದರು. ಇದೀಗ ರಿಸಲ್ಟ್ ನೆಗೆಟಿವ್ ಬಂದಿದೆ. ಧೋನಿ ಜೊತೆ ಮೋನು ಕುಮಾರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ.
ಹೀಗಾಗಿ ಧೋನಿ ನಾಳೆ ಚೆನ್ನೈ ಸಿಎಸ್ಕೆ ಕ್ಯಾಂಪ್ ಅನ್ನು ಸೇರಿಕೊಳ್ಳಲಿದ್ದಾರೆ. ಚೆನ್ನೈನಲ್ಲಿ ಮತ್ತೊಂದು ಸುತ್ತಿನ ಕೋವಿಡ್ ಟೆಸ್ಟ್ ನಡೆಯಲಿದೆ. ಚೆನ್ನೈನ ಚಿಪಾಕ್ ಮೈದಾನಲ್ಲಿ ಆಗಸ್ಟ್ 15ರಿಂದ 21ರವರೆಗೆ ಸಿಎಸ್ಕೆ ತಂಡ ಒಂದು ವಾರಗಳ ತರಬೇತಿ ಶಿಬಿರವನ್ನು ಆಯೋಜನೆ ಮಾಡಿದೆ. ತಮಿಳುನಾಡು ಸರ್ಕಾರ ತರಬೇತಿ ಶಿಬಿರಕ್ಕೆ ಅನುಮತಿ ನೀಡಿದೆ. ಶಿಬಿರದಲ್ಲಿ ಧೋನಿ ಜೊತೆ ಹರ್ಭಜನ್ ಸಿಂಗ್, ಸುರೇಶ್ ರೈನಾ, ಪಿಯೂಷ್ ಚಾವ್ಲಾ ಕೂಡ ಭಾಗಿಯಾಗಲಿದ್ದಾರೆ. ತರಬೇತಿ ಶಿಬಿರದ ನಡುವೆ ಕೋವಿಡ್ ಟೆಸ್ಟ್ ನಡೆಸಲಾಗುವುದು. ಆಗಸ್ಟ್ 21ರಂದು ಚೆನ್ನೈ ತಂಡ ಯುಎಇಗೆ ಪ್ರಯಾಣ ಬೆಳೆಸಲಿದೆ.
ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದೆ. ಯುಎಇನಲ್ಲಿ ಕ್ವಾರಂಟೈನ್ ಮಾರ್ಗಸೂಚಿಗಳು ಮತ್ತು ಎಸ್ಒಪಿ ನಿಯಮಗಳನ್ನು ಪಾಲಿಸಿಕೊಂಡು ಜೈವಿಕ ಸುರಕ್ಷತೆಯಲ್ಲಿ ಪಂದ್ಯಗಳು ನಡೆಯಲಿವೆ. ಅಬುದಾಬಿ, ಶಾರ್ಜಾ ಮತ್ತು ದುಬೈನಲ್ಲಿ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.