ಬರ್ತಿದ್ದಾನೆ ಕಬಾಲಿ… ದಾರಿ ಬಿಡಿ ಎಂದ ಸಿಎಸ್ ಕೆ
ಮುಂಬೈ : ಕಳೆದ ಐಪಿಎಲ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಏಳನೇ ಸ್ಥಾನಕ್ಕೆ ಸೀಮಿತವಾಗ ಚೆನ್ನೈ ಸೂಪರ್ ಕಿಂಗ್ಸ್ ಭಾರಿ ಟೀಕೆಗೆ ಒಳಗಾಗಿತ್ತು. ಇದೀಗ ತಂಡದಲ್ಲಿ ಕೆಲವೊಂದು ಬದಲಾವಣೆಗಳು ಆಗಿದ್ದು, ಕರ್ಮ, ಕತೃ,ಕ್ರಿಯೆ ಎಲ್ಲವೂ ತಾನಾಗಿ ತಂಡವನ್ನ ನಡೆಸುವ ಧೋನಿ ಮೇಲೆ ಈ ಬಾರಿ ಬೆಟ್ಟದಷ್ಟು ನಿರೀಕ್ಷೆಗಳಿವೆ. ಧೋನಿ ಇದ್ದರೇ ಎಲ್ಲವೂ ಸಾಧ್ಯ ಎಂಬ ವಿಶ್ವಾಸ ಟೀಂ ಮ್ಯಾನಕ್ ಮೆಂಟ್ ಕೂಡ ಇದೆ. ಅದಕ್ಕೆ ತಕ್ಕಂತೆ ಧೋನಿ ಈ ಬಾರಿ ಎಲ್ಲರಿಗಿಂತ ಮೊದಲೇ ತಾಲೀಮು ಆರಂಭಿಸಿದ್ದಾರೆ. ಧೋನಿ ಸತತವಾಗಿ ಅಭ್ಯಾಸ ಮಾಡುತ್ತಿರುವ ವೀಡಿಯೊಗಳನ್ನು ಸಿಎಸ್ ಕೆ ಇನ್ ಸ್ಟಾದಲ್ಲಿ ಹಂಚಿಕೊಂಡಿದೆ.
ದೊಡ್ಡ ಹೊಡೆತ ಹೊಡೆಯುವುದರಲ್ಲಿ ಧೋನಿ ಸಿದ್ಧಹಸ್ತ. ಸದ್ಯ ವೈರಲ್ ಆಗಿರುವ ವಿಡಿಯೋ ಕೂಡ ಇದನ್ನ ಸಾರಿ ಹೇಳುತ್ತಿದೆ. ಈ ಬಾರಿ ಎದುರಾಳಿಗೆ ತಮ್ಮ ತಾಕತ್ತು ತೋರಿಸಲೇಬೇಕು ಎಂಬಂತೆ ಧೋನಿ ಪ್ರಾಕ್ಟೀಸ್ ಮಾಡುತ್ತಿರುವುದು ಗೊತ್ತಾಗುತ್ತಿದೆ.
ಸಿಎಸ್ಕೆ ಇತ್ತೀಚೆಗೆ ಇದೇ ವಿಷಯವನ್ನು ಸ್ಪಷ್ಟಪಡಿಸಿದೆ. ಬೌಲರ್ಸ್.. ನಿಮ್ಮನ್ನು ಪುಡಿಗಟ್ಟಲು ತಲಾ ಪರಾಕ್ ಫುಲ್ಲಿ ಲೋಡ್ ಆಗುತ್ತಿದೆ. ವಿಜಿಲ್ಪೋಡು ಅಂತಾ ಎದುರಾಳಿ ತಂಡಕ್ಕೆ ವಾರ್ನಿಂಗ್ ಕೊಟ್ಟಿದೆ ಸಿಎಸ್ ಕೆ.
