MTB: ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಎಂಟಿಬಿ ನಾಗರಾಜ್
ಬಿಜೆಪಿಯಿಂದಲೇ ನನ್ನ ರಾಜಕೀಯ ನಿವೃತ್ತಿಯೇ ಹೊರತು ಬೇರೆ ಯಾವ ಪಕ್ಷಗಳಿಗೂ ಹೋಗುವುದಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರ ಸೇವೆ ಮಾಡಲು ಬಿಜೆಪಿ ಸೇರಿದ್ದೇನೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ. ನನ್ನ ರಾಜಕೀಯ ನಿವೃತ್ತಿ ಕೂಡ ಬಿಜೆಪಿಯಿಂದಲೇ ಆಗುತ್ತದೆ, ಬೇರೆ ಯಾವ ಪಕ್ಷಗಳಿಗೂ ಹೋಗುವುದಿಲ್ಲವೆಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟು ಬಂದಿದ್ದ ಕಾರಣ ಕಾರ್ಯಕರ್ತರು ಬೇಸರಗೊಂಡಿದ್ದರು. ಹಾಗಾಗಿ ಹಿಂದಿನ ಚುನಾವಣೆಯಲ್ಲಿ ನನಗೆ ಸೋಲಾಗಿರಬಹುದು. ಈಗ ಬಿಜೆಪಿಯೇ ನನಗೆ ಮಾತೃಪಕ್ಷ. ಒಂದೊಂದು ಚುನಾವಣೆಗೆ ಒಂದೊಂದು ಪಕ್ಷ ಆಯ್ಕೆ ಮಾಡಿಕೊಳ್ಳುವ ಜಾಯಾಮಾನ ನನ್ನದಲ್ಲ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.
MTB: MTB Nagaraj spoke about his political retirement