ಬಿ ಎಸ್ ವೈ ರಾಜೀನಾಮೆ : ನನಗೆ ಯಾವುದೇ ಆತಂಕ ಇಲ್ಲ – ಎಂಟಿಬಿ
ಬಿ ಎಸ್ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ, ವಲಸಿಗ ಸಚಿವರಾದ ಎಂಟಿಬಿ ನಾಗರಾಜ್ ಅವರು ಪ್ರತಿಕ್ರಿಯೆ ನೀಡಿದ್ದು, ಯಾರೇ ಸಿಎಂ ಆದ್ರೂ ತೊಂದರೆ ಇಲ್ಲ. ಪಕ್ಷ ಮತ್ತು ನಾಡಿಗೆ ಕೆಲಸ ಮಾಡುವ ವ್ಯಕ್ತಿ ಬೇಕು. ಯಾರನ್ನ ಕೈ ಬಿಡ್ತಾರೆ, ಯಾರನ್ನ ಮುನ್ನಡೆಸ್ತಾರೆ ಅನ್ನೋದು ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
ಇದೇ ವೇಳೆ ನಾವು ಮೋದಿ ಆಡಳಿತ, ಅಭಿವೃದ್ಧಿ ಮೆಚ್ಚಿ ಪಕ್ಷಕ್ಕೆ ಬಂದೆವು. ಆಗ ಸಿಎಂ ಬದಲಾವಣೆ ನಿರೀಕ್ಷೆ ಇರಲಿಲ್ಲ. ಈಗ ಮದ್ಯದಲ್ಲಿ ಬದಲಾವಣೆ ಆಗಿದೆ. ಪುರಸಭೆ ಅಧ್ಯಕ್ಷರಾಗಿ ಈಗ ಸಿಎಂ ಆಗಿ ಬಂದವರು. ಅನೇಕ ಏಳು ಬೀಳುಗಳನ್ನ ಕಂಡವರು ಯಡಿಯೂರಪ್ಪ. ವಿಶ್ವನಾಥ್ ತಮ್ಮ ವಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಅನೇಕ ಹಾಗು ಹೋಗುಗಳ ಬಗ್ಗೆ ನಾನು ಚರ್ಚೆ ಮಾಡಲ್ಲ. ನನಗೆ ಯಾವುದೇ ಆತಂಕ ಇಲ್ಲ. ಸಚಿವರಾಗಿ ಮಾಡುದ್ರೂ ಓಕೆ, ಮಾಡದಿದ್ರೂ ಯಾವುದೇ ಬೇಸರ ಇಲ್ಲ ಎಂದಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ : ಕಣ್ಣೀರಿಟ್ಟ ಬಿ ಎಸ್ ವೈ – ಸಹಿಸಲಾಗದೇ ಅಭಿಮಾನಿ ನೇಣಿಗೆ ಶರಣು..!
ಇನ್ನೂ ವಲಸೆ ಶಾಸಕರು ಯಾವುದೇ ಸಭೆ ಮಾಡಿಲ್ಲ. ಯಡಿಯೂರಪ್ಪ ಅವರನ್ನ ನಂಬಿ ಬಂದೆವು. ಮೋದಿ ಅವರ ಆಡಳಿತ ಮೆಚ್ಚಿ ಬಂದೆವು. ರಾಜ್ಯದಲ್ಲಿ ಯಡಿಯೂರಪ್ಪ ಹೈಕಮಾಂಡ್. ದೇಶದಲ್ಲಿ ಮೋದಿ ಹೈಕಮಾಂಡ್. ಮಾದ್ಯಮದಲ್ಲಿ ಹತ್ತಾರು ಹೆಸರು ಸಿಎಂ ರೇಸ್ನಲ್ಲಿ ಕೇಳಿ ಬರ್ತಿದೆ. ಬೆಲ್ಲದ್, ನಿರಾಣಿ, ಜೋಶಿ ಸೇರಿದಂತೆ ಅನೇಕ ಹೆಸರು ಹೇಳಿದ್ದಾರೆ. ವರಿಷ್ಠರು ಯಾರನ್ನಾದ್ರೂ ಸಿಎಂ ಮಾಡಲಿ. ಯಡಿಯೂರಪ್ಪ ಹೆದರಬೇಡಿ ಅಂತ ಹೇಳಿದ್ದಾರೆ ಎಂದಿದ್ದಾರೆ.
ಅಲ್ಲದೇ ನನಗೆ ಮಂತ್ರಿ ಸ್ಥಾನ ಇರಲಿ, ಇಲ್ಲದಿರಲಿ ಸಂತೋಷದಿಂದ ಇರುತ್ತೇನೆ ಎಂದರು. ಯಡಿಯೂರಪ್ಪ 50 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರು. ರಾಜಕೀಯ ಜೀವನದಲ್ಲಿ ಏಳುಬೀಳು ಸಹಜ. ಹೀಗಾಗಿ ರಾಜೀನಾಮೆ ವೇಳೆ ಭಾವುಕರಾಗಿದ್ದಾರೆ ಅಷ್ಟೇ ಎಂದು ಹೇಳಿದರು.