75th Independence day – ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ ಅಂಬಾನಿ ಕುಟುಂಬ
ಇಡೀ ದೇಶ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದ ಮೂಲೆ ಮೂಲೆಯಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಯುವಕರು, ಮಕ್ಕಳು, ವೃದ್ಧರು ಎಲ್ಲರೂ ಸ್ವಾತಂತ್ರ್ಯದ ಸಂಭ್ರಮದಲ್ಲಿ ಸಂಭ್ರಮ ಪಡುತ್ತಿದ್ದಾರೆ. ಬಡವರು ಮತ್ತು ಶ್ರೀಮಂತರು ಎಲ್ಲರೂ ಈ ವಿಶೇಷ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆಯೇ. ಇದೇ ವೇಳೆ ದೇಶದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿರುವ ಅಂಬಾನಿ ಕುಟುಂಬ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿರುವ ವಿಡಿಯೋ ಹೊರಬಿದ್ದಿದೆ.
#WATCH | Reliance Industries chairman Mukesh Ambani along with his wife Nita Ambani and grandson Prithvi Ambani celebrates Independence Day pic.twitter.com/QNC8LmtoHL
— ANI (@ANI) August 15, 2022
ವೀಡಿಯೊದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಸಹ ತಮ್ಮ ಉದ್ಯೋಗಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದನ್ನು ಕಾಣಬಹುದು.
ಅಂಬಾನಿ ಕುಟುಂಬದ ಕಿರಿಯ ಸದಸ್ಯರಾದ ಮುಖೇಶ್ ಮತ್ತು ನೀತಾ ಅಂಬಾನಿಯವರ ಮೊಮ್ಮಗ ಪೃಥ್ವಿ ಅಂಬಾನಿಯವರ ತುಂಟಾಟ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಪೃಥ್ವಿ, ಮುಖೇಶ್ ಅಂಬಾನಿ ಮಡಿಲಲ್ಲಿದ್ದಾರೆ. ಪಾಪು ಮತ್ತೆ ಮತ್ತೆ ತಮ್ಮ ಬೆರಳುಗಳನ್ನ ಬಾಯಿಯಲ್ಲಿ ಹಾಕಲು ಪ್ರಯತ್ನಿಸುತ್ತದೆ, ಆದರೆ ಮುಖೇಶ್ ಅಂಬಾನಿ ಇದನ್ನ ತಡೆಯುತ್ತಾರೆ. ಇದರ ನಂತರ, ಪೃಥ್ವಿ ನೀತಾ ಅಂಬಾನಿಯಿಂದ ತ್ರಿವರ್ಣ ಧ್ವಜವನ್ನು ಕೇಳುತ್ತಾನೆ ಮತ್ತು ಇಬ್ಬರೂ ಒಟ್ಟಿಗೆ ತ್ರಿವರ್ಣ ಧ್ವಜವನ್ನು ಬೀಸುತ್ತಾರೆ.