ತಿರುಪತಿ ದೇವಸ್ಥಾನಕ್ಕೆ 1.5 ಕೋಟಿ ದೇಣಿಗೆ ನೀಡಿದ ಮುಖೇಶ್ ಅಂಬಾನಿ..
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ಸಮೀಪದ ತಿರುಪತಿಗೆ ಬೇಟಿ ನೀಡಿ ವೆಂಕಟೇಶ್ವರ ದೇಗುಲಕ್ಕೆ ₹ 1.5 ಕೋಟಿ ಅರ್ಪಿಸಿದ್ದಾರೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೆಂಕಟೇಶ್ವರನ ಪರಮ ಭಕ್ತರಾದ ಅಂಬಾನಿಯವರು ಎನ್‌ಕೋರ್ ಹೆಲ್ತ್ ಕೇರ್ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಮತ್ತು ಇತರ ಆರ್‌ಐಎಲ್ ಅಧಿಕಾರಿಗಳ ಜೊತೆ ಶುಕ್ರವಾರ ನಸುಕಿನಲ್ಲಿ ತಿರುಪತಿಗೆ ಆಗಮಿಸಿದ್ದಾರೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಪೂಜೆಯ ನಂತರ ಅಂಬಾನಿ ಅವರು ದೇಗುಲದಲ್ಲಿ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ ವೆಂಕಟ ಧರ್ಮ ರೆಡ್ಡಿ ಅವರಿಗೆ ₹ 1.5 ಕೋಟಿ ಚೆಕ್ ಹಸ್ತಾಂತರಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಟ್ಟದ ಮೇಲಿರುವ ಅತಿಥಿ ಗೃಹದಲ್ಲಿ ಸ್ವಲ್ಪ ಸಮಯದ ನಂತರ, ಅಂಬಾನಿ, ರಾಧಿಕಾ ಮರ್ಚೆಂಟ್ ಮತ್ತು ಇತರರು ಬೆಳಗಿನ ಜಾವದಲ್ಲಿ ವೆಂಕಟೇಶ್ವರಸ್ವಾಮಿ ಅಭಿಷೇಕದ ಭಾಗವಿಸಿದ್ದಾರೆ. ತಿರುಪತಿ ತೊರೆಯುವ ಮೊದಲು ಅಂಬಾನಿ ದೇವಸ್ಥಾನದ ಆನೆಗಳಿಗೆ ದೇವಾಲಯದಲ್ಲಿ ಆಹಾರವನ್ನ ನೀಡಿದ್ದಾರೆ.