ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಎನ್ ಕೌಂಟರ್ ಸ್ಪೆಷಲಿಸ್ಟ್ ಕೈವಾಡ , ಸಚಿನ್ ವಾಜಿ ಬಂಧನ..!
ಮುಂಬೈ: ಭಾರತದ ಆಗರ್ಭ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮನೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ಹೊಸ ಹೊಸ ಟ್ವಿಸ್ಟ್ ಗಳು ಸಿಗುತ್ತಿವೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜಿಯವರನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ.
ಫೆಬ್ರವರಿ 25 ರಂದು ಮುಕೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಕಾರು ಹಾಗೂ ಬೆದರಿಕೆ ಪತ್ರವೊಂದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಸಚಿನ್ ವಾಜಿಯವರಿಗೆ ತನಿಖೆ ನಡೆಸಲು ಸೂಚಿಸಲಾಗಿತ್ತು, ಆದರೆ ಬಳಿಕ ಅವರನ್ನು ತೆಗೆದು ಹಾಕಿ ಪ್ರಕರಣ ಕುರಿತಂತೆ ತನಿಖೆ ನಡೆಸಲು NIA ನಿರ್ಧರಿಸಿತ್ತು. ಇದೀಗ ಆಶ್ಚರ್ಯಕರ ಬೆಳವಣಿಗೆಯಲ್ಲಿ ಸಚಿನ್ ವಾಜಿಯರನ್ನ ಬಂಧಿಸಲಾಗಿದೆ. ಮೊದಲಿಗೆ ಅವರನ್ನ 12 ಗಂಟೆಗಳ ಕಾಲ ವಿಚಾರಣೆ ನಡೆಸಿ ನಂತರ ತಡರಾತ್ರಿ 11.50ಕ್ಕೆ ಅವರನ್ನ ಬಂಧಿಸಲಾಗಿದೆ.
ಎಂಥ ಜನ ಇವರು… ನಿದ್ದೆಯಲ್ಲಿದ್ದ ಸಿಂಹದ ಜೊತೆ ಪಾಕಿಸ್ತಾನದ ನವದಂಪತಿ ಫೋಟೋಶೂಟ್ : ನೆಟ್ಟಿಗರಿಂದ ಛೀಮಾರಿ..!
ಅಂಬಾನಿ ನಿವಾಸದ ಬಳಿ ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕ ಥಾಣೆ ಉದ್ಯಮಿ ಮನ್ಸುಖ್ ಹಿರಾನ್ ಮೃತದೇಹ ಇತ್ತೀಚೆಗಷ್ಟೇ ಪತ್ತೆಯಾಗಿತ್ತು. ಇದೇ ಪ್ರಕರಣದ ಹಿಂದೆ ಸಚಿನ್ ವಾಜಿ ಅವರ ಪಾತ್ರವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಅವರನ್ನ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ತಯಾರಿ ನಡೆಸಿದ್ದಾರೆ NIA ಅಧಿಕಾರಿಗಳು ಈ ಪ್ರಕರಣದಲ್ಲಿ ಅಂದ್ರೆ ಕಾರ್ಮೈಕಲ್ ರಸ್ತೆ ಬಳಿ ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಇರಿಸುವಲ್ಲಿ ಸಚಿನ್ ವಾಜಿರವರ ಪಾತ್ರವಿದೆ ಎಂದು NIA ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ಹಿನ್ನೆಲೆ ಅವರ ವಿರುದ್ಧ ಸೆ. 120 ಬಿ, ಸೆ. 286, ಸೆ.465, ಸೆ. 473, ಸೆ. 502 (2), ಅಡಿಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತಂತೆ ತನಿಖೆ ಜಾರಿಯಲ್ಲಿದೆ.