ಹೊಸದಿಲ್ಲಿ, ಮೇ 23 : ಇಡೀ ಜಗತ್ತೇ ಲಾಕ್ ಡೌನ್ ನಿಂದ ಬಸವಳಿದಿದ್ದು, ದೇಶಗಳ ಅರ್ಥಿಕತೆ ಕುಸಿದಿದೆ. ವ್ಯಾಪಾರ, ವಹಿವಾಟು, ಷೇರುಗಳು ಕುಸಿದು ಜಾಗತಿಕ ಅರ್ಥಿಕ ಬಿಕ್ಕಟ್ಟು ಉಂಟಾಗಿರುವಾಗ ವಿಶ್ವದ ಟಾಪ್ 100 ಅತಿ ದೊಡ್ಡ ಶ್ರೀಮಂತ ಪಟ್ಟಿಯಲ್ಲಿರುವ ಮುಕೇಶ್ ಅಂಬಾನಿ ಮಾತ್ರ ಇದರಿಂದ ವಿಚಲಿತರಾಗಿಲ್ಲ.
ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಸೇರಿದ ಜಿಯೋ ಡಿಜಿಟಲ್ ಪ್ಲಾಟ್ಫಾರ್ಮ್ ವ್ಯವಹಾರಕ್ಕಾಗಿ 10 ಶತಕೋಟಿ ಡಾಲರ್ಗಿಂತಳೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದಾರೆ. ಇದೀಗ ಜಿಯೋ ಪ್ಲಾಟ್ ಫಾರ್ಮ್ ಲಿಮಿಟೆಡ್ ನಲ್ಲಿ ಅಮೆರಿಕದ ಖಾಸಗಿ ಬಂಡವಾಳ ಹೂಡಿಕೆ ಸಂಸ್ಥೆ ಕೆಕೆಆರ್ 2.32 ಪರ್ಸೆಂಟ್ ಪಾಲು ಖರೀದಿ ಮಾಡಲಿದೆ. ಅದಕ್ಕಾಗಿ 11,367 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಿದ್ದು, ಇದು ಏಷ್ಯಾದಲ್ಲಿ ಕೆಕೆಆರ್ ಮಾಡುತ್ತಿರುವ ಅತಿದೊಡ್ಡ ಹೂಡಿಕೆಯಾಗಿದೆ.
ಇದರಿಂದಾಗಿ ಜಿಯೋ ಪ್ಲಾಟ್ ಫಾರ್ಮ್ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರೂಪಾಯಿ ಮತ್ತು ಎಂಟರ್ ಪ್ರೈಸ್ ಮೌಲ್ಯ 5.16 ಲಕ್ಷ ಕೋಟಿ ರೂಪಾಯಿ ಆಗಲಿದೆ. ಇತ್ತೀಚೆಗಷ್ಟೇ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ಟಾ, ಜನರಲ್ ಅಟ್ಲಾಂಟಿಕ್ ಹಾಗೂ ಕೆಕೆಆರ್ ಸೇರಿ ಸರಾಸರಿ 78,562 ಕೋಟಿ ರುಪಾಯಿಯನ್ನು ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ದವು.
ಈ ಮೊದಲು ರಿಲಾಯನ್ಸ್ ಡಿಟಿಜಲ್ ಯೂನಿಟ್ನಲ್ಲಿ ಫೇಸ್ಬುಕ್, ಸಿಲ್ವರ್ ಲೇಕ್, ವಿಸ್ಠಾ ಈಕ್ವಿಟಿ ಮತ್ತು ಜನರಲ್ ಅಂಟ್ಲಾಟಿಕ್ ಸಂಸ್ಥೆಗಳು ಒಟ್ಟು 67.194.75 ಕೋಟಿ ರೂ.ಗಳನ್ನು ತೊಡಗಿಸಿದೆ. ಕೊರೊನಾ ವೈರಸ್ ಸೋಂಕಿನ ಬಿಕ್ಕಟ್ಟಿನ ಸಂದರ್ಭದಲ್ಲೂ ಅಂಬಾನಿಯ ಜಿಯೋ ಕಂಪನಿ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.