ನವದೆಹಲಿ : 40 ವರ್ಷಗಳ ವಯೋಮಾನಕ್ಕಿಂತ ಕಡಿಮೆ ವಯಸ್ಸಿನವರು ಅಂದರೆ ‘ಅಂಡರ್ 40’ ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಭಾರತದ ನಾಲ್ವರು ಸೇರ್ಪಡೆಗೊಂಡಿದ್ದಾರೆ. ಈ ಪೈಕಿ ಜಗತ್ತಿನ ಶ್ರೀಮಂತ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ, ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಮಕ್ಕಳಾದ ಇಶಾ ಹಾಗೂ ಆಕಾಶ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಪುರಸ್ಕಾರಕ್ಕೆ ಪ್ರಮುಖ 5 ವಿಭಾಗಗಳಾದ ಆರೋಗ್ಯ, ಹಣಕಾಸು, ಸರ್ಕಾರ, ತಂತ್ರಜ್ಞಾನ ಹಾಗೂ ರಾಜಕೀಯ ಮತ್ತು ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರಗಳಿಂದ ಪ್ರತಿವರ್ಷ ಪ್ರಭಾವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ಈ ಬಾರಿ ತಂತ್ರಜ್ಞಾನ ವಿಭಾಗದಿಂದ ರಿಲಯನ್ಸ್ ಜಿಯೋ ಬೋರ್ಡ್ನ ನಿರ್ದೇಶಕರಾದ 28 ವರ್ಷದ ಇಶಾ ಹಾಗೂ 28 ವರ್ಷದ ಆಕಾಶ್ ಅಂಬಾನಿ ಆಯ್ಕೆಯಾಗಿದ್ದಾರೆ.
ಇನ್ನೂ ಇದರ ಹೊರತಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲ್ಲಾ ಮತ್ತು ಭಾರತದ ಪ್ರಮುಖ ಶಿಕ್ಷಣ ತಂತ್ರಜ್ಞಾನ ಕಂಪನಿಯಾದ ಬೈಜುವಿನ ಸಹ ಸಂಸ್ಥಾಪಕರಾದ ಬೈಜು ರವೀಂದ್ರನ್ ಅವರೂ ಸಹ ಜಗತ್ತಿನ ಪ್ರಭಾವಿ ಅಂಡರ್ 40 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.