ಏಷ್ಯಾದ ಅತಿ ಶ್ರೀಮಂತ ಮುಖೇಶ್ ಅಂಬಾನಿ… ಜಗತ್ತಿನಲ್ಲಿ ಎಷ್ಟನೇ ಸ್ಥಾನ..?
ಮುಂಬೈ : ಬಹುಕೋಟಿ ಒಡೆಯ ಭಾರತದ ಆಗರ್ಭ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಏಷ್ಯಾದ ಮತ್ತೊಮ್ಮೆ ಏಷ್ಯಾದ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ 10ನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಅಂದ್ಹಾಗೆ
ಅಮೆರಿಕಾ ಹಾಗೂ ಚೀನಾ ನಂತರ ಗರಿಷ್ಠ ಸಂಖ್ಯೆಯ ಶತಕೋಟ್ಯಾಧೀಶರನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ.
ಈ ಬಗ್ಗೆ ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ಸಿರಿವಂತರ ಕುರಿತಾದ 35ನೇ ವಾರ್ಷಿಕ ಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ. ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯವು 84.5 ಶತಕೋಟಿ ಡಾಲರ್ ಎಂದು ಫೋರ್ಬ್ಸ್ ವರದಿ ಹೇಳಿದೆ.
ಇವರ ನಂತರದ ಸ್ಥಾನದಲ್ಲಿ ಗೌತಮ್ ಅದಾನಿ, ಹೆಚ್ಸಿಎಲ್ನ ಶಿವ ನಡಾರ್ ಸ್ಥಾನ ಪಡೆದಿದ್ದಾರೆ.
ಮೊದಲನೇ ಸ್ಥಾನದಲ್ಲಿ ಅಮೆಜಾನ್ ನ ಸಿಇಒ ಹಾಗೂ ಸಂಸ್ಥಾಪಕ ಜೆಫ್ ಬೇಜೋಸ್
2ನೇ ಸ್ಥಾನದಲ್ಲಿ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ನ ಸಿಇಒ ಎಲೋನ್ ಮಸ್ಕ್ ಇದ್ದಾರೆ.