ಹೆಂಡತಿ ಮೇಲಿನ ಸಿಟ್ಟಿಗೆ ಮಕ್ಕಳಿಗೆ ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿ ಕೊಟ್ಟ ತಂದೆ
ಮುಂಬೈ: ತಂದೆಯೊಬ್ಬ ತನ್ನ ಮೂವರು ಮಕ್ಕಳಿಗೆ ಐಸ್‍ಕ್ರೀಮ್‍ನಲ್ಲಿ ವಿಷ ಬೆರೆಸಿ ಕೊಟ್ಟಿರುವ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.ಈ ಘಟನೆಯಲ್ಲಿ ವಿಷ ಸೇವಿಸಿದ 5 ವರ್ಷದ ಅಲಿಷನ್ ಅಲಿ ಮೃತಪಟ್ಟಿದ್ರೆ, 2 ವರ್ಷದ ಅರ್ಮಾನ್ ಹಾಗೂ 7 ವರ್ಷದ ಅಲೀನಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ..
ಮುಂಬೈನ ಮನ್‍ಖುರ್ದ್ ನ ನಿವಾಸಿ ಮೊಹಮ್ಮದ್ ಅಲಿ ನೌಶಾದ್ ಜೂನ್ 25ರಂದು ತನ್ನ ಪತ್ನಿಯ ಜೊತೆಗೆ ಜಗಳವಾಡಿದ್ದಾನೆ. ಪತ್ನಿಯ ಮೇಲಿನ ಸಿಟ್ಟಿನಿಂದ ಮಕ್ಕಳಿಗೆ ವಿಷ ಹಾಕಿದ್ದಾನೆ. ಐಸ್‍ಕ್ರೀಮ್‍ನಲ್ಲಿ ಇಲಿ ಪಾಷಾಣವನ್ನು ಬೆರೆಸಿ ಕೊಟ್ಟಿದ್ದಾನೆ. ಮಕ್ಕಳು ಮಕ್ಕಳು ಐಸ್ ಕ್ರೀಮ್ ತಿಂದು ತೀವ್ರ ಅಸ್ವಸ್ಥರಾಗಿದ್ದಾರೆ. ಬಳಿಕ ಸ್ಥಳೀಯರು ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಒಂದು ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.. ಆರೋಪಿ ತಮದೆಯ ವಿರುದ್ಧ ಆತನ ಹೆಂಡತಿ ದೂರು ನೀಡಿದ್ದು, ಮುಂಬೈ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.