Mumbai Indians : ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಅರುಣ್ ಕುಮಾರ್
ಮುಂಬರುವ ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕರ್ನಾಟಕದ ಮಾಜಿ ಆಟಗಾರ ಅರುಣ್ ಕುಮಾರ್ ಜಗದೀಶ್ ಅವರನ್ನು ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಮಾಡಿದೆ.
47 ವರ್ಷದ ಅರುಣ್ ಕುಮಾರ್ ತಂಡದ ನೂತನ ಬ್ಯಾಟಿಂಗ್ ಕೋಚ್ ಕಿರಾನ್ ಪೋಲಾರ್ಡ್ ಅವರ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡದ ಮಾರ್ಕ್ ಬೌಚರ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಕನ್ನಡಿಗ ಅರುಣ್ ಕುಮಾರ್ ಬ್ಯಾಟಿಂಗ್ ಕೋಚ್ ಆಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. 2013-14, 2014-15ರಲ್ಲಿ ಕರ್ನಾಟಕ ಕ್ರಿಕೆಟ್ ತಂಡ ರಣಜಿ, ಇರಾನಿ ಮತ್ತು ವಿಜಯ್ ಹಜಾರೆ ಟೂರ್ನಿ ಗೆಲ್ಲಿಸುವಲ್ಲಿ ಕೋಚ್ ಅರುಣ್ ಪ್ರಮುಖ ಪಾತ್ರವಹಿಸಿದ್ದರು.
2020ರಿಂದ ಯುಎಸ್ಎ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಸುತ್ತಿದ್ದಾರೆ. 1993ರಿಂದ 2008ರವರೆಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.
ಅರುಣ್ ಕುಮಾರ್ ಕರ್ನಾಟಕ ಪರ 109 ಮೊದಲ ದರ್ಜೆ ಕ್ರಿಕೆಟ್ ನಿಂದ 20 ಶತಕ ಸಿಡಿಸಿ 7,208 ರನ್ ಗಳಿಸಿದ್ದಾರೆ.